ಬುಧವಾರ, ಅಕ್ಟೋಬರ್ 23, 2019
27 °C

ಕೊರಿಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ : ಭಾರತದ ಭರವಸೆ ಸೈನಾ

Published:
Updated:

ನವದೆಹಲಿ (ಪಿಟಿಐ): ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಂಗಳವಾರ ದಕ್ಷಿಣ ಕೊರಿಯಾದಲ್ಲಿ ಆರಂಭವಾಗಲಿರುವ ಕೊರಿಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿದ್ದಾರೆ.ವರ್ಷದ ಮೊದಲ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಬೇಕು ಎನ್ನುವ ಉದ್ದೇಶ ಹೈದರಾಬಾದ್‌ನ ಆಟಗಾರ್ತಿಯದ್ದು. ಇದೇ ಆಶಯವನ್ನು ಹೊತ್ತು ಸೈನಾ ಇಂದು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿದ್ದಾರೆ.ಸೈನಾ ಕಳೆದ ವರ್ಷ ವಿವಿಧ ಟೂರ್ನಿಗಳಲ್ಲಿ ನಾಲ್ಕು ಸಲ ಫೈನಲ್ ಪ್ರವೇಶಿಸಿದ್ದರು. ಆದರೆ, ಸ್ವಿಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಮಾತ್ರ ಪ್ರಶಸ್ತಿ ಜಯಿಸಲು ಅವರಿಗೆ ಸಾಧ್ಯವಾಗಿತ್ತು. ಹಾಂಕಾಂಗ್ ಟೂರ್ನಿಯಲ್ಲೂ ಪ್ರಶಸ್ತಿ ಸನಿಹ ಎಡವಿದ್ದರು. ಮೊದಲ ಪಂದ್ಯದಲ್ಲಿ ಭಾರತದ ಆಟಗಾರ್ತಿ ಸ್ಕಾಟ್ಲೆಂಡ್‌ನ ಸೂಸನ್ ಅವರ ಸವಾಲನ್ನು ಎದುರಿಸಲಿದ್ದಾರೆ.  ಆರಂಭದ ಪಂದ್ಯಗಳಲ್ಲಿ ಗೆಲುವು ಪಡೆದರೆ, ಚೀನಾದ ಯಿಹಾನ್ ವಾಂಗ್ ಎದುರು ಎಂಟರ ಘಟ್ಟದಲ್ಲಿ ಪೈಪೋಟಿ ನಡೆಸಬೇಕಾಗಬಹುದೆನ್ನುವ ನಿರೀಕ್ಷೆಯನ್ನು ಸೈನಾ ಹೊಂದಿದ್ದಾರೆ.ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಎಂಟರಘಟ್ಟ ಪ್ರವೇಶಿಸಿದ್ದ ಅಜಯ್ ಜಯರಾಮನ್ ಈ ಸಲ ಪುರುಷರ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದಾರೆ. ಈ ಆಟಗಾರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆತಿಥೇಯ ಕೊರಿಯಾದ ವಾನ್ ಹೂ ಶೋನ್ ಎದುರು ಆಡಲಿದ್ದಾರೆ.ಯುವ ಆಟಗಾರ ಸೌರಭ್ ವರ್ಮಾ ಮಲೇಷ್ಯಾದ ಎಲ್. ಡೆರನ್ ವಿರುದ್ಧ ಸೆಣಸಲಿದ್ದಾರೆ. ಭಾರತದ ಆನಂದ್ ಪವಾರ್ ಸಿಂಗಪುರದ ಜಿ ಲೆಯಿಂಗ್ ಡೆರೆಕ್ ವಾಂಗ್ ಮೇಲೂ, ಆರ್.ಎಂ.ವಿ. ಗುರುಸಾಯಿದತ್ ಅವರು ಚೈನೀಸ್ ತೈಪಿಯಿಯಾದ ಜೆನ್ ಹೊಯಿ ಸೂ ಎದುರು ಸೆಣಸಲಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)