ಬುಧವಾರ, ಜೂನ್ 16, 2021
21 °C

ಕೊಲಂಬಿಯಾ ಏಷ್ಯಾದಲ್ಲಿ ಯಕೃತ್ ಕಸಿ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಜನತೆ ಇನ್ನು ಯಕೃತ್ ಕಸಿಗಾಗಿ ಚೆನ್ನೈ ಅಥವಾ ನವದೆಹಲಿಗೆ ಹೋಗಬೇಕಾದ ಕಷ್ಟ ತಪ್ಪಿದೆ.`ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫೆರಲ್ ಆಸ್ಪತ್ರೆಯು ಇನ್ನು ಮುಂದೆ ಯಕೃತ್ ಕಸಿಯನ್ನು ಬೆಂಗಳೂರಿನಲ್ಲೇ ಮಾಡಲಿದೆ~ ಎಂದು ನಿರ್ದೇಶಕ ಡಾ.ನಂದಕುಮಾರ್ ಜೈರಾಮ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರ ಚಿಕಿತ್ಸೆಯ ಸಂಪೂರ್ಣ ಸೌಕರ್ಯವನ್ನು ಮೆಡೆಂಟಾ-ದ ಮೆಡಿಸಿಟಿ ಅವರಿಂದ ಮಾನ್ಯತೆ ಪಡೆದು ಕೊಲಂಬಿಯಾ ಏಷ್ಯಾ ನಿರ್ವಹಿಸಲಿದೆ. ಮಾ 11 ರಂದು ಆಸ್ಪತ್ರೆಯಲ್ಲಿ ವಿಶೇಷ ಯಕೃತ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ~ ಎಂದರು.`ರೆಜಿನೇಟಿವ್ ಮೆಡಿಸಿನ್ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಸ್.ಸೊಯ್ನ, ಮೆಡೆಂಟಾದ ಹಿರಿಯ ವೈದ್ಯ ಡಾ.ಬಾಲಚಂದ್ರನ್ ಮೆನನ್, ಗ್ಯಾಸ್ಟೆಂಟಾಲಜಿ ವಿಭಾಗದ ಮುಖ್ಯಸ್ಥ ಡಾ.ನರೇಶ್ ಭಟ್, ಹೆಪಟಾಲಜಿಸ್ಟ್ ಡಾ.ಜಾರ್ಜ್ ಅಲೆಕ್ಸಾಂಡರ್ ಅವರ ಕಸಿ ತಂಡವು ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ~ ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಹೆಪಟಾಲಜಿಸ್ಟ್ ಡಾ.ಜಾರ್ಜ್ ಅಲೆಕ್ಸಾಂಡರ್, ಮುಖ್ಯ ವ್ಯವಸ್ಥಾಪಕ ಡಾ.ಸುನಿಲ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.