ಕೊಲೆ ತನಿಖೆ ಸಿಐಡಿಗೆ: ಬಿದರಿ ಆದೇಶ ಹೈಕೋರ್ಟ್‌ನಿಂದ ರದ್ದು

7

ಕೊಲೆ ತನಿಖೆ ಸಿಐಡಿಗೆ: ಬಿದರಿ ಆದೇಶ ಹೈಕೋರ್ಟ್‌ನಿಂದ ರದ್ದು

Published:
Updated:

ಬೆಂಗಳೂರು: ಚಿತ್ರನಟ ವಿನೋದ್ ಕುಮಾರ್ ಅವರ ಕೊಲೆ ಪ್ರಕರಣವನ್ನು ಮುಂದಿನ ತನಿಖೆಗೆ ಸಿಐಡಿಗೆ ಒಪ್ಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೊರಡಿಸಿದ್ದ ಆದೇಶವನ್ನು  ಹೈರ್ಕೋ ಮಂಗಳವಾರ ರದ್ದುಗೊಳಿಸಿ ಆದೇಶಿಸಿದೆ.4ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಅಂತಿಮ ಹಂತದಲ್ಲಿ ಇರುವಾಗಲೇ ಅದನ್ನು ಸಿಐಡಿಗೆ ಒಪ್ಪಿಸಲಾಗಿದೆ. ಇದು ಸರಿಯಲ್ಲ ಎಂದು ದೂರಿ ವಿನೋದ್ ಅವರ ಸಹೋದರ ಎನ್.ಕಿರಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ಆನಂದ ನಡೆಸಿದರು.ಇವರ ಕೊಲೆಯನ್ನು ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರೇ ಮಾಡಿದ್ದಾರೆ ಎನ್ನುವುದು ಆರೋಪ. 2008ರ ಅಕ್ಟೋಬರ್ 6ರಂದು ನಗರದ ಬಾಗಲೂರು ಬಳಿಯ `ಎಲ್‌ಜಿ ರೋಸ್~ ಅತಿಥಿ ಗೃಹದಲ್ಲಿ ವಿನೋದ್ ಕೊಲೆ ನಡೆದಿತ್ತು. ಔತಣಕೂಟಕ್ಕೆ ಬಂದಿದ್ದ ಅವರ ಮೇಲೆ ಗುಂಡು ಹಾರಿಸಿಲಾಗಿತ್ತು ಎಂಬುದು ಆರೋಪ.`ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕರು ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದು ಸರಿಯಲ್ಲ~ ಎಂದು ಅರ್ಜಿಯಲ್ಲಿ ಕಿರಣ್ ದೂರಿದ್ದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry