ಮಂಗಳವಾರ, ಜೂನ್ 15, 2021
27 °C

ಕೊಲೆ ಮಾಡಿ ಕಾಲು ಎಸೆದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೇರೆ ಕಡೆಗೆ ಕೊಲೆ ಮಾಡಿ ಎರಡು ಕೈ ಮತ್ತು ಎರಡು ಕಾಲುಗಳನ್ನು ತಂದು ಎಸೆದಿರುವುದು ಇಲ್ಲಿನ ಕಿಲ್ಲಾ ಪ್ರದೇಶದ ತರಕಾರಿ ಮಾರುಕಟ್ಟೆ ಸಮೀಪ ಮಂಗಳವಾರ ಪತ್ತೆಯಾಗಿದೆ.‘ಬೇರೆ ಕಡೆಗೆ ಕೊಲೆ ಮಾಡಿ ಕೈ ಮತ್ತು ಕಾಲುಗಳನ್ನು ಇಲ್ಲಿಗೆ ತಂದು ಹಾಕಲಾಗಿದೆ. ಕೈ ಮತ್ತು ಕಾಲುಗಳಿಗೆ ಬೆಂಕಿ ಹಚ್ಚಿ ಸಾಕ್ಷಿ ನಾಶ ಪಡಿಸಲು ಯತ್ನಿಸಲಾಗಿದೆ. ಆದರೆ, ಸರಿಯಾಗಿ ಬೆಂಕಿ ಹಚ್ಚದ ಕಾರಣ ನಾಶ ಪಡಿಸಲು ಸಾಧ್ಯವಾಗಿಲ್ಲ. ತಲೆ ಸೇರಿದಂತೆ ದೇಹದ ಉಳಿದ ಭಾಗವನ್ನು ಬೇರೆ ಕಡೆಗೆ ಎಸೆದಿರಬಹುದು. ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.‘ಕೊಲೆಯಾಗಿರುವುದು ಮಹಿಳೆ ಅಥವಾ ಪುರುಷ ಎಂಬುದು ಗೊತ್ತಾಗಿಲ್ಲ. ಪತ್ತೆಯಾಗಿರುವ ಕೈ– ಕಾಲುಗಳನ್ನು ಲಿಂಗ ಪತ್ತೆಗಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಕೆಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.