ಕೊಲೆ ಯತ್ನಕ್ಕೆ ವಿಷ ಕನ್ನಿಕೆ ಬಳಕೆ: ದಲೈ ಲಾಮಾ

7

ಕೊಲೆ ಯತ್ನಕ್ಕೆ ವಿಷ ಕನ್ನಿಕೆ ಬಳಕೆ: ದಲೈ ಲಾಮಾ

Published:
Updated:

ಧರ್ಮಶಾಲಾ/ಲಂಡನ್ (ಐಎಎನ್‌ಎಸ್): `ಚೀನಾದ ಏಜೆಂಟರಿಂದ ನನ್ನ ಜೀವಕ್ಕೆ ಅಪಾಯ ಇದೆ~ ಎಂದಿರುವ ಟಿಬೆಟ್ ಧರ್ಮಗುರು ದಲೈ ಲಾಮಾ, ಅದಕ್ಕಾಗಿ ಟಿಬೆಟ್  ಮಹಿಳೆಗೆ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಧರ್ಮಶಾಲಾ ಮೂಲದ ಲಾಮಾ ಅವರ ಕಚೇರಿಯೂ  ಭಾನುವಾರ ಇದನ್ನು ದೃಢಪಡಿಸಿದ್ದು, `ಅವರ ಜೀವಕ್ಕೆ ಅಪಾಯ ಇರುವುದು ನಮ್ಮ ಅನುಭವಕ್ಕೂ ಬಂದಿದೆ~ ಎಂದು ಹೇಳಿದೆ. `ಜೀವಕ್ಕೆ ಅಪಾಯ ಇರುವ ಸಂದೇಶವೂ ಅವರಿಗೆ ಬಂದಿದೆ~ ಲಾಮಾ ಅವರ ಆಪ್ತ ಕಾರ್ಯದರ್ಶಿ ಚಿಮ್ಮೆ ಚೊಕ್ಯಾಪ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.  ಸೋಮವಾರ ಟೆಂಪ್ಲೆಟನ್ ಪ್ರಶಸ್ತಿ ಸ್ವೀಕರಿಸಲು ಲಂಡನ್‌ಗೆ ಆಗಮಿಸಿರುವ ಲಾಮಾ ಭಾನುವಾರ `ಟೆಲಿಗ್ರಾಫ್~ಗೆ ಸಂದರ್ಶನ ನೀಡಿದ್ದು, `ನನಗೆ ವಿಷ ಕೊಟ್ಟು ಹತ್ಯೆ ಮಾಡಲು ಟಿಬೆಟ್ ಮಹಿಳೆಯೊಬ್ಬಳಿಗೆ ಚೀನಾ ಏಜೆಂಟರು ತರಬೇತಿ ನೀಡಿದ್ದಾರೆ ಎಂಬ ಸುಳಿವು ಸಿಕ್ಕಿದೆ~ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry