ಕೊಳಚೆಯೇ ಊರಿಗೆ ಅವಮಾನ

ಶನಿವಾರ, ಮೇ 25, 2019
22 °C

ಕೊಳಚೆಯೇ ಊರಿಗೆ ಅವಮಾನ

Published:
Updated:

ಜೇವರ್ಗಿ: ಊರ ಮುಂದಿರುವ ಕೊಳಚೆಯೇ ಸ್ಥಳೀಯ ಜನತೆ-ಮುಖಂಡರಿಗೆ ಅವಮಾನ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಜೈರಾಮ್ ರಮೇಶ ಹೇಳಿದರು.ತಾಲ್ಲೂಕಿನ ಗಂವ್ಹಾರ ಗ್ರಾಮದಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆ ಅಡಿಯಲ್ಲಿ ಇನ್‌ಫೋಸಿಸ್, ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ನಿರ್ಮಿಸಿದ ಮನೆಗಳನ್ನು ಭಾನುವಾರ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 60 ವರ್ಷ ಕಳೆದ ಬಳಿಕ, ವಿಶ್ವದಲ್ಲೇ ತೃತೀಯ ಶಕ್ತಿಯಾಗಿ ಭಾರತ ರೂಪುಗೊಂಡ ಬಳಿಕವೂ ದೇಶದ 2.40ಲಕ್ಷ ಗ್ರಾಮಗಳ ಪೈಕಿ ಕೇವಲ ಶೇ 10ರಷ್ಟು ಸಂಪೂರ್ಣ ಶೌಚಾಲಯ ಹೊಂದಿರುವುದು ಬೇಸರದ ಸಂಗತಿ ಎಂದರು.ಪರಿಶುದ್ಧ ಯೋಜನೆ ಅಡಿಯಲ್ಲಿ ಗಂವ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಐದು ಗ್ರಾಮಗಳಲ್ಲಿ 762 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಶೌಚಾಲಯ ಅಗತ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಾಸುದೇವ ದೇಶಪಾಂಡೆ ಮಾಹಿತಿ ನೀಡಿದರು.ನಂತರ ಗಂವ್ಹಾರದಲ್ಲಿನ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಶ್ರೀಮಠದ ಪೀಠಾಧಿಪತಿ ಸೋಪಾನನಾಥ ಸ್ವಾಮೀಜಿ ಸಚಿವ ಜಯರಾಂ ರಮೇಶ ಅವರನ್ನು ಸನ್ಮಾನಿಸಿದರು.ಮನವಿ: ಡಾ. ಡಿ.ಎಂ.ನಂಜುಂಡಪ್ಪ ಅವರ ಪ್ರಾದೇಶಿಕ ಅಸಮಾತೋಲನ ವರದಿ ಅನ್ವಯ ಜೇವರ್ಗಿ ತಾಲ್ಲೂಕು ಅತೀ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ರಾಜ್ಯದ 175 ತಾಲ್ಲೂಕುಗಳಲ್ಲಿ

ಜೇವರ್ಗಿ 174 ಸ್ಥಾನದಲ್ಲಿದೆ. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ 200ಕೋಟಿ ಅನುದಾನ ಬಿಡುಗಡೆಗೊಳಿಸಬೇಕೆಂದು ಕ್ಷೇತ್ರದ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮನವಿ ಪತ್ರ ಸಲ್ಲಿಸಿದರು.ಜೇವರ್ಗಿ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕುಂಠಿತಗೊಂಡಿದ್ದರಿಂದ ಬರದ ಛಾಯೆ ಆವರಿಸಿದೆ. ರಾಜ್ಯ ಸರ್ಕಾರ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡಿಲ್ಲ. ಕೆಲಸ ಅರಸಿ ಕೃಷಿ-ಕೂಲಿಕಾರರು ಹೊರ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಕಾಂಗ್ರೆಸ್ ಮುಖಂಡ ಡಾ.ಅಜಯಸಿಂಗ್, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೇರಡಗಿ ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಶೌಚಾಲಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಮಲಾಬಾಯಿ ಹಾಗೂ ಡಾ.ಇಂದೂಮತಿ ಅವರನ್ನು ಸಚಿವರು ಸನ್ಮಾನಿಸಿದರು.ಸಚಿವರ ಭೇಟಿ ಸಂದರ್ಭದಲ್ಲಿ ಸಂಸದ ಬಸವರಾಜ ಪಾಟೀಲ ಸೇಡಂ, ಶಾಸಕರಾದ ಡಾ.ಶರಣಪ್ರಕಾಶ ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಂಪ್ರಭು ಪಾಟೀಲ, ಕೆಪಿಸಿಸಿ ಸದಸ್ಯ ಡಾ.ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರ, ತಾ.ಪಂ. ಅಧ್ಯಕ್ಷೆ ನೀಲಾಬಾಯಿ ಚವ್ಹಾಣ, ಪಾಂಡುರಂಗ ಜೋಶಿ, ರಾಜಶೇಖರ ಸೀರಿ, ಜಿ.ಪಂ. ಸದಸ್ಯ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ, ಮಾಜೀದ ಗಿರಣಿ, ಸೈಯದ್ ಫಯಾಜ್ ಜಮಾದಾರ, ತಿಪ್ಪಣ್ಣ ಗುಂಡಗುರ್ತಿ, ಸಕ್ರೆಪ್ಪಗೌಡ ಹರನೂರ, ನಾಸೀರಖಾನ್ ನಾಡಗೌಡ,

ಜಿ.ಪಂ. ಮಾಜಿ ಸದಸ್ಯ ಖಾಸಿಂಪಟೇಲ್ ಮುದವಾಳ, ಕಲ್ಯಾಣರಾವ್ ಗಂವ್ಹಾರ, ಶ್ರೀಪಾದ ಜೋಶಿ,

ರಾಘವೇಂದ್ರ ಕುಲಕರ್ಣಿ ಯಡ್ರಾಮಿ, ಎ.ಬಿ.ದೇಸಾಯಿ, ಕಾಶಿರಾಯಗೌಡ ಯಲಗೋಡ, ವಸಂತರಾವ್ ನರಿಬೋಳ, ಶಾಂತಗೌಡ ದುಮ್ಮದ್ರಿ, ಬಸವರಾಜ ಕುಕನೂರ, ಬಸವರಾಜ ಹರಸೂರ, ಬಸವರಾಜ ಪಾಟೀಲ ಗಂವ್ಹಾರ, ವಿಜಯಕುಮಾರ ಪಾಟೀಲ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry