ಕೊಳಚೆ ಆಗರ ವಟಗಲ್

7

ಕೊಳಚೆ ಆಗರ ವಟಗಲ್

Published:
Updated:

ಕವಿತಾಳ: ಎಲ್ಲೆಡೆ ಹರಿಯುತ್ತಿರುವ ನೀರು; ಎಲ್ಲೆಂದರಲ್ಲಿ ಹಾಕಿದ ತಿಪ್ಪೆಗಳ ರಾಶಿ. ಇಕ್ಕಟ್ಟಾದ ಓಣಿಯಲ್ಲಿ ತುಂಬಿರುವ ಗಲೀಜು... ಒಟ್ಟಾರೆ ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡುವ ಪರಿಸರ. ಇದು ಸಮೀಪದ ವಟಗಲ್ ಗ್ರಾಮದ ಚಿತ್ರಣ.ಇಲ್ಲಿಗೆ ದಾಂಗುಡಿ ಇಟ್ಟಿವೆ ಸೊಳ್ಳೆಗಳು! ಎರಡು ತಿಂಗಳ ಅವಧಿಯಲ್ಲಿ 15 ಜನ (ಅದರಲ್ಲೂ 6-8 ವಯಸ್ಸಿನ ಮುದ್ದು ಕಂದಮ್ಮಗಳು) ಡೆಂಗೆಯಿಂದ ಬಳಲುತ್ತಿದ್ದರೆ, ಅನೇಕರು ಮಲೇರಿಯಾದಿಂದ ತತ್ತರಿಸಿದ್ದಾರೆ.ಪಾಮನಕಲ್ಲೂರು ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯ ವಟಗಲ್ ಗ್ರಾಮಕ್ಕೆ ದೂರದ ಬಳ್ಳಾರಿ ಎಂದರೆ ಡೆಂಗೆ ದೆಸೆಯಿಂದ ಪಕ್ಕದ ಮನೆ ಎನ್ನುವಂತಾಗಿದೆ.ತೀವ್ರ ಜ್ವರ, ವಾಂತಿಯಿಂದ ಬಳಲುತ್ತಿದ್ದ 12 ಮಕ್ಕಳನ್ನು ಲಿಂಗಸುಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಡೆಂಗೆ ಎಂದು ಶಂಕಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸಗೆ ದಾಖಲಿಸಲು ಸೂಚಿಸಿದ್ದಾರೆ.ಅದರಂತೆ ಅನೇಕರು ಇಂದಿಗೂ ವಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಕ್ಕಳು ಇದೀಗ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಜಿಲ್ಲಾ ಮಲೇರಿಯಾ ವೈದ್ಯಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಶನಿವಾರ ಭೇಟಿ ನೀಡಿ `ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನೀರು ಹರಿಯಲು ಬಿಡಬೇಡಿ. ಹಗಲು ಕಚ್ಚುವ ಸೊಳ್ಳೆಯಿಂದ ಡೆಂಗೆ ಬರುತ್ತದೆ.

 

ಇದು ಮಲೇರಿಯಾದ ತೀವ್ರೆತೆಯೇ ಹೊರತು ಡೆಂಗೆ ಅಲ್ಲ~ ಎಂದು ವಿಮ್ಸ ವೈದ್ಯರು ನೀಡಿದ ವರದಿಯನ್ನು ತಳ್ಳಿ ಹಾಕಿ ಉಚಿತ ಸಲಹೆಗಳನ್ನು ನೀಡಿದ್ದು ಬಿಟ್ಟರೆ ರೋಗ ನಿಯಂತ್ರಣಕ್ಕೆ ಗಂಭೀರ ಪ್ರಯತ್ನ ಮಾಡಿಲ್ಲ. ಡೆಂಗೆಯಿಂದ ಬಳ್ಳಾರಿಯ ವಿಮ್ಸಗೆ ಸೇರಿಸಿದ್ದ 8 ವರ್ಷದ ಆದಮ್ಮ ಭಾನುವಾರ ಮೃತಪಟ್ಟಿದ್ದು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.20 ದಿನಗಳಿಂದ ಅನೇಕ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ನೀಡಿದ್ದರೂ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಕೆ.ರಾಮರೆಡ್ಡಿ ಆರೋಪಿಸಿದ್ದಾರೆ. ಗ್ರಾಮದಲ್ಲಿ ತಾತ್ಕಾಲಿಕ ಶಿಬಿರ ಹಾಕಿ ಚಿಕಿತ್ಸೆ ನೀಡಬೇಕು ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ರಾಮರೆಡ್ಡಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry