`ಕೊಳವೆಬಾವಿ, ಪರಿಕರ ಖರೀದಿ ಅವ್ಯವಹಾರ'

7

`ಕೊಳವೆಬಾವಿ, ಪರಿಕರ ಖರೀದಿ ಅವ್ಯವಹಾರ'

Published:
Updated:

ಬಾಗೇಪಲ್ಲಿ: ತಾಲ್ಲೂಕಿಗೆ ಕುಡಿಯುವ ನೀರು ಕಲ್ಪಿಸಲು ಜಿಲ್ಲಾಧಿಕಾರಿಗಳ ಅನುದಾನದ ಕಾಮಗಾರಿಯಲ್ಲಿ ಪರಿಕರಗಳು ಹಾಗೂ ಕೊಳವೆಬಾವಿ, ಪಂಪ್, ಮೋಟಾರ್, ಕೇಬಲ್‌ಗಳು ಹಾಕಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಆಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶಂಕರರೆಡ್ಡಿ ತಿಳಿಸಿದರು.ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಟುಕಪಲ್ಲಿ, ಮಲಕಚೆರುವುಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕೊಳವೆಬಾವಿಗಳನ್ನು ಖುದ್ದು ಪರಿಶೀಲಿಸಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪವಿಭಾಗದಿಂದ ಅಳವಡಿಸಿರುವ ಕೊಳವೆಬಾವಿ, ಪಂಪ್, ಮೋಟಾರ್, ಕೇಬಲ್‌ಗಳು ಹಾಗೂ ಕಳಪೆ ಮಟ್ಟದ ಪರಿಕರಗಳನ್ನು ಜೋಡಿಸಲಾಗಿದೆ ಎಂದು ಆರೋಪಿಸಿದರು.ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಟುಕಪಲ್ಲಿ ಗ್ರಾಮದ ಕೃಷ್ಣಾರೆಡ್ಡಿ ಎಂಬ ರೈತರ ಹೆಸರಿನಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಕೊಳವೆಬಾವಿಗೆ 1.80 ಲಕ್ಷ ಅನುದಾನದಲ್ಲಿ ಸರ್ಕಾರದ ಪ್ರಕಾರ 25 ಎಚ್‌ಪಿ ಟೆಕ್ಸಮೋ ಕಂಪೆನಿ ಮೋಟಾರ್ ಅಳವಡಿಸಬೇಕು. ಆದರೆ ವಿಜಯ್ ಮೋಟಾರ್ ಅಳವಡಿಸಿಲಾಗಿದೆ. 310 ಮೀಟರ್ ಕೇಬಲ್‌ಗಳಿಗೆ 240 ಮೀ, 25 ಕಾಲರ್‌ಗಳಿಗೆ 18 ಮಾತ್ರ ಜೋಡಿಸಲಾಗಿದೆ ಎಂದರು. ಗ್ರಾಮದ ರಸ್ತೆ ಬದಿಯಲ್ಲಿ ಅಳವಡಿಸಿರುವ ಮತ್ತೊಂದು ಕೊಳವೆಬಾವಿಗೆ ಸುಮಾರು 2.32 ಲಕ್ಷ ಅನುದಾನದಲ್ಲಿ ಕೇಬಲ್ 350ಮೀಟರ್ ಕೇಬಲ್‌ಗೆ 182 ಮೀಟರ್, 30 ಪೈಪ್‌ಗಳಿಗೆ 14, 30 ಕಾಲರ್ಸ್‌ಗಳಿಗೆ 15 ಮಾತ್ರ ಅಳವಡಿಸಲಾಗಿದೆ.ಮಲಕಚೆರವುಪಲ್ಲಿ ಗ್ರಾಮದಲ್ಲಿ ಅಳವಡಿಸಿರುವ ಕೊಳವೆಬಾವಿಗೆ 25 ಪೈಪ್‌ಗಳಿಗೆ 20 ಪೈಪ್, 310 ಮೀಟರ್ ಕೇಬಲ್‌ಗಳಿಗೆ 260 ಮೀಟರ್ ಅಳವಡಿಸಲಾಗಿದೆ ಎಂದು ಆರೋಪಿಸಿದರು.ಬರಗಾಲದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರು ಕಲ್ಪಿಸಲು ಜಿಲ್ಲಾಧಿಕಾರಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ಆದರೆ ಜಿಲ್ಲಾಪಂಚಾಯಿತಿ ತಾಂತ್ರಿಕ ಉಪವಿಭಾಗದ ಅಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಶಾಮೀಲಾಗಿ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ. ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಕಂಡುಬಂದಿದೆ. ಇನ್ನುಳಿದ ಗ್ರಾಮ ಪಂಚಾಯಿತಿಗಳಲ್ಲಿ ಅದೆಷ್ಟು ಅವ್ಯವಹಾರ ನಡೆದಿದೆ ಎಂದು ಪ್ರಶ್ನಿಸಿದರು.ಕಳಪೆ ಮಟ್ಟದ ಪರಿಕರಗಳನ್ನು ಅಳವಡಿಸಿರುವುದರಿಂದ ಪ್ಯಾನಲ್‌ಬೋರ್ಡ್ ಸುಟ್ಟಿದೆ. ತಮ್ಮ ಹಣದಲ್ಲಿ ಬುಧವಾರ ಕೊಳವೆಬಾವಿಗಳನ್ನು ಪರಿಶೀಲಿಸಲಾಗಿದೆ. ರಾತ್ರೋರಾತ್ರಿ ಡ್ರಿಲಿಂಗ್ ಮಾಡಿಸಲಾಗುವುದು. ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ಕೂಡಲೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ಈ ಸಂದಸರ್ಭದಲ್ಲಿ ಮುಖಂಡರಾದ ಸೋಮಶೇಖರರೆಡ್ಡಿ, ನಂಜುಂಡಪ್ಪ, ಚಂದ್ರಶೇಖರರೆಡ್ಡಿ,ವೆಂಕಟೇಶ, ಆವುಲಪ್ಪ, ಚೆನ್ನಾರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry