ಸೋಮವಾರ, ಮೇ 10, 2021
21 °C

ಕೊಳವೆ ಬಾವಿಗಳ ಮರುಪೂರಣ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳವೆ ಬಾವಿಗಳ ಮರುಪೂರಣ ತರಬೇತಿ

ಕೃಷಿ ತಂತ್ರಜ್ಞರ ಸಂಸ್ಥೆ,  ಕೃಷಿ ಇಲಾಖೆ, ಮತ್ತು ಇತರ ಸಂಸ್ಥೆಗಳ ಆಶ್ರಯದಲ್ಲಿ ಹೆಬ್ಬಾಳದ ತಂತ್ರಜ್ಞರ ಸಂಸ್ಥೆಯಲ್ಲಿ ಕೊಳವೆ ಬಾವಿಗಳಿಗೆ ನೀರು ಮರುಪೂರಣ ತರಬೇತಿಯನ್ನು ಏರ್ಪಡಿಸಲಾಗಿತ್ತು.

ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಕೆ.ವಿ. ಸರ್ವೇಶ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕಿನ ಜ್ಯೋತಿಪುರ, ಕಿತ್ತಗನೂರು ಮತ್ತು ಗುಂಡೂರು ಗ್ರಾಮಗಳ ಹಾಗೂ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ, ಅತ್ತಿಬೆಲೆ ಮತ್ತು ಅರಸನಹಳ್ಳಿ ಗ್ರಾಮಗಳ 150ಕ್ಕೂ ಹೆಚ್ಚು ರೈತರು ತರಬೇತಿ ಪಡೆದರು.

ಅಂತರ್ಜಲ ಭೂಗರ್ಭಶಾಸ್ತ್ರಜ್ಞ ಎನ್.ಜೆ.ದೇವರಾಜ ರೆಡ್ಡಿ ಕೊಳವೆ ಬಾವಿಗಳ ಮರುಪೂರಣದ ಬಗ್ಗೆ ಮಾಹಿತಿ ನೀಡಿದರು. ಡಾ.ಡಿ.ರಾಜಗೋಪಾಲ್, ಎನ್.ಬಸವರಾಜು, ಡಾ.ಆರ್. ಲೋಕಪ್ರಕಾಶ್, ಎಚ್. ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.