ಸೋಮವಾರ, ಮೇ 23, 2022
24 °C

ಕೊಳವೆ ಬಾವಿ ದುರಂತ: ಕೊನೆಗೂ ಬದುಕುಳಿಯದ ಮಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರಗಾಂವ್ (ಪಿಟಿಐ): ಇಲ್ಲಿನ ಮನೆಸರ್ ಪ್ರದೇಶದ ಕೊಳವೆ ಬಾವಿಯೊಂದರ 70 ಅಡಿ ಆಳದಲ್ಲಿ ಸಿಲುಕಿ, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದ ನಾಲ್ಕು ವರ್ಷದ ಬಾಲೆ ಮಹಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗೆ ಭಾನುವಾರ ಶವವಾಗಿ ಸಿಕ್ಕಿದ್ದಾಳೆ.`ಮಹಿಯನ್ನು ಕೊಳವೆಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಕೆ ಬದುಕಿ ಉಳಿದಿರಲಿಲ್ಲ~ ಎಂದು ಗುರಗಾಂವ್ ಜಿಲ್ಲಾಧಿಕಾರಿ ಪಿ.ಸಿ.ಮೀನಾ ಹೇಳಿದರು.ಕಳೆದ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದ ತಂಡಕ್ಕೆ ಮಧ್ಯದಲ್ಲಿ ದೊಡ್ಡ ಕಲ್ಲು ಬಂಡೆಯೊಂದು ಎದುರಾಗಿ ಶೀಘ್ರ ರಕ್ಷಣಾ ಕಾರ್ಯಕ್ಕೆ ತೊಡಕು ಉಂಟುಮಾಡಿತ್ತು. ಆದರೆ ಆ ಬಂಡೆ ಕೊರೆಯುವ ಕಾರ್ಯ ಕಳೆದ ರಾತ್ರಿಯಷ್ಟೇ ಮುಗಿಸಿದ ತಂಡ ನಿರೀಕ್ಷಿತ ಗುರಿ ತಲುಪಿದ್ದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹಿ ಕೊನೆಉಸಿರೆಳೆದಿದ್ದಳು.ಮನೆಸರ್ ಪ್ರದೇಶದಲ್ಲಿರುವ ಕೋ ಗ್ರಾಮಕ್ಕೆ ಸೇರಿದ ಮಹಿಯೂ ಜೂನ್ 20ರಂದು ತನ್ನ ಸ್ನೇಹಿತೆಯರೊಂದಿಗೆ ಆಡುತ್ತಿದ್ದ ಸಮಯದಲ್ಲಿ  ಆಕಸ್ಮಿಕವಾಗಿ ಕಾಲು ಜಾರಿ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.