ಮಂಗಳವಾರ, ಏಪ್ರಿಲ್ 13, 2021
31 °C

ಕೊಳವೆ ಬಾವಿ: ಸತ್ಯಶೋಧನೆ ವರದಿ ಶುದ್ಧ ಸುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ವಿಜಯಕುಮಾರ ಪಾಟೀಲರು ಬರಗಾಲದ ಸಂದರ್ಭದಲ್ಲಿ ಕೊರೆ ಯಿಸಿದ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಏಕಪಕ್ಷೀಯ ಸ್ವಯಂ ಘೋಷಿತ ಸತ್ಯಶೋಧನಾ ಸಮಿತಿ ರಚಿಸಿ ಕೊಂಡು ನೀಡಿದ ವರದಿ ಶುದ್ಧ ಸುಳ್ಳು. ಸತ್ಯಾಂಶ ಮರೆಮಾಚಿ ವಿಜುಗೌಡರ ಘನತೆಗೆ ಕುಂದುಂಟು ಮಾಡಿದ್ದಾರೆ~ ಎಂದು ಬಬಲೇಶ್ವರ ಕ್ಷೇತ್ರದ ಜೆಡಿಎಸ್ ಮುಖಂಡರು ಆರೋಪಿಸಿದರು.ಶುಕ್ರವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜಿ.ಪಂ. ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ಹಾಗೂ ಕೆಎಂಎಫ್ ನಿರ್ದೇಶಕ ಗಿರೀಶ ಕೋರಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ ಬಡ್ರಿ, ಬೋಳಚಿಕ್ಕಲಕಿಯ ಗುರುಲಿಂಗಪ್ಪ ಅಂಗಡಿ, ಎಪಿಎಂಸಿ ನಿರ್ದೇಶಕ ಚನ್ನಪ್ಪ ಕೊಪ್ಪದ ಮತ್ತಿತರರು ಈ ಆರೋಪ ಮಾಡಿದರು.`ವಿಜುಗೌಡರು ಎಷ್ಟು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ ಎಂಬುದು ವೈಯಕ್ತಿಕ ವಿಚಾರ. ಸಂಘ-ಸಂಸ್ಥೆಗಳು, ಸರ್ಕಾರದಿಂದ ಅವರು ನೆರವು ಪಡೆದಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದಾರೆ. ಅವರು ಮಾಡಿದ ಖರ್ಚು-ಕೊರೆಸಿದ ಕೊಳವೆ ಬಾವಿಗಳ ಬಗ್ಗೆ ಲೆಕ್ಕಕೊಡುವ ಅವಶ್ಯಕ ತೆಯೂ ಇಲ್ಲ. ಸ್ವಂತ ಹಣದಿಂದ ಕೊರೆಯಿಸಿದ ಕೊಳವೆ ಬಾವಿಗಳ ಬಗ್ಗೆ ತನಿಖೆ ಮಾಡಿಸಲು ಅವರ‌್ಯಾರು? ಕಾಂಗ್ರೆಸ್ ಪಕ್ಷದ ಜಿ.ಪಂ.ಮತ್ತು ತಾ.ಪಂ.ಸದಸ್ಯರು ಸರ್ಕಾರದಿಂದ ಮಂಜೂ ರಾದ ಕೊಳವೆ ಬಾವಿಗಳನ್ನು ಎಲ್ಲಿ ಕೊರೆಯಿಸಿದ್ದಾರೆ ಎಂಬ ಬಗ್ಗೆ ಲೋಕಾಯುಕ್ತ ತನಿಖೆಯಾಗಲಿ. ಆ ಬಗ್ಗೆ ನಾವು ದಾಖಲೆ ಒದಗಿಸುತ್ತೇವೆ~ ಎಂದರು.`ವಿಜುಗೌಡರು ಸಾರ್ವಜನಿಕವಾಗಿ ಹಾಗೂ ಅವಶ್ಯವಿದ್ದ ರೈತರಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಯಿ ಸಿದ್ದಾರೆ. ಅವರು ಕೊರೆಯಿಸಿದ ಕೊಳವೆ ಬಾವಿಯಿಂದ ನೀರು ಪಡೆಯುತ್ತಿರುವ ಫಲಾನುಭವಿಗಳೂ ಇದ್ದಾರೆ. ಅವರನ್ನು ಕೇಳಿದರೆ ಮಾಹಿತಿ ನೀಡುತ್ತಿದ್ದರು. ಅದನ್ನು ಬಿಟ್ಟು ಸತ್ಯಶೋಧನಾ ಸಮಿತಿಯವರು ಕಾಂಗ್ರೆಸ್ಸಿಗರ ಮನೆಗೆ ಹೋಗಿ ಅವರಿಂದ ಮಾಹಿತಿ ಪಡೆ ದಿದ್ದಾರೆ. ಆ ಸಮಿತಿಯಲ್ಲಿ ಅಧಿಕಾರಿ ಗಳಿಲ್ಲ. ಒಂದೊಮ್ಮೆ ಅವರು ಜಂಟಿ ಸಮಿತಿ ರಚಿಸಿ ತನಿಖೆ ನಡೆಸಿದ್ದರೆ ನಿಜ ವಾದ ಸತ್ಯ ಹೊರಬರುತ್ತಿತ್ತು. ಈಗಲೂ ಅವರು ಬಯಸಿದರೆ ಜಂಟಿ ಸಮೀಕ್ಷೆಗೆ ನಾವು ಸಿದ್ಧ~ ಎಂದು  ಸವಾಲು ಹಾಕಿದರು.`ಜೀವಜಲಧಾರೆ ಹೆಸರಿನಲ್ಲಿ ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತಿ ರುವುದು ಕಾಂಗ್ರೆಸ್ ನಾಯಕರ ಹೊಟ್ಟೆ ಉರಿಸುವಂತೆ ಮಾಡಿದೆ. ತಾವು ಜನರಿಗೆ ಸಹಾಯ ಮಾಡಲಿಲ್ಲ. ಮತ್ತೊಬ್ಬರು ಮಾಡಿದರೆ ಸಹಿಸುವ ಸೌಜನ್ಯವೂ ಇಲ್ಲ. ಟ್ಯಾಂಕರ್ ನೀರು ಹೊಸಲು ಎಂದು ಆರೋಪ ಮಾಡಿದ್ದಾರೆ. ವಿಜಯ ಕುಮಾರ ಪಾಟೀಲರ ಮನೆ ಯಲ್ಲಿ ಕುಡಿಯಲು ಬಳಸುವ ನೀರಿನ್ನೇ ಮತಕ್ಷೇತ್ರದ ಜನತೆಗೂ ಕೂಡ ಪೂರೈಸುತ್ತಿದ್ದಾರೆ.ತಿಕೋಟಾ ದಾನಮ್ಮದೇವಿ ಜಾತ್ರೆ ಮಹಾಪ್ರಸಾದ ಸಿದ್ಧ ಪಡಿಸುವುದಕ್ಕೂ ಜೀವಜಲಧಾರೆ ನೀರು ಪೂರೈಕೆ ಮಾಡಲಾಗಿದೆ. ನೀರು ಹೊಲಸಾಗಿದ್ದರೆ, ಕುಡಿಯಲು ಯೋಗ್ಯವಾಗಿಲ್ಲದೇ ಇದ್ದರೆ ದೊಡ್ಡ ಅನಾಹುತವೇ ಸಂಭವಿಸಬೇಕಿತ್ತಲ್ಲ? ಮೂರು ತಿಂಗಳಿನಿಂದ ನೀರು ಕುಡಿಯುತ್ತಿರುವವರೆಲ್ಲ ಚೆನ್ನಾಗಿಯೇ ಇದ್ದಾರೆ~ ಎಂದರು.`ಸತ್ಯ ಶೋಧನಾ ಸಮಿತಿ ಗ್ರಾಮಗಳಲ್ಲಿ ಸಂಚರಿಸಿ ವರದಿ ಸಿದ್ಧಪಡಿಸುವುದಕ್ಕೆ ಮಾಡಿದ ವೆಚ್ಚ ಮತ್ತು ಶ್ರಮವನ್ನು ಜನರಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಮಾಡಿದ್ದರೆ ಪುಣ್ಯ ಬರುತ್ತಿತ್ತು. ಕಾಂಗ್ರೆಸ್ ಪಕ್ಷದವರಿಗೆ ಜನಪರ ಕಾಳಜಿಗಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ. ಕಾಂಗ್ರೆಸ್ ಪಕ್ಷದ ಅಪಪ್ರಚಾರದಿಂದ ನಮ್ಮ ನಾಯಕನ ಮನಸ್ಸಿಗೆ ನೋವಾಗಿದೆ~ ಎಂದು ಆರೋಪಿಸಿದರು.`ನಮ್ಮೂರಿನಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದರಿಂದ ವಿಜುಗೌಡರು ಸ್ವಂತ ಹಣ ನೀಡಿ ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಸ್ಥಳೀಯ ಶಾಸಕರು ಜನರ ಕಾಳಜಿ ಮರೆತಾಗ ಅವರು ವಿಜುಗೌಡರ ಬಳಿ ಹೋಗಿ ನೆರವು ಪಡೆದುಕೊಂಡಿದ್ದಾರೆ~ ಎಂದು ಗುರುಲಿಂಗಪ್ಪ ಅಂಗಡಿ ಹೇಳಿದರು.`ನೀರಿನ ಸಮಸ್ಯೆ ಪರಿಹರಿಸುವಂತೆ ಕೋರಿದಾಗ ವಿಜುಗೌಡರೇ ಸ್ವಂತ ಹಣದಿಂದ ಕೊಳವೆ ಬಾವಿ ಕೊರೆಸಿದ್ದಾರೆ. ಆ ಕೊಳವೆ ಬಾವಿಯ ನೀರನ್ನೇ ನಾವು ಕುಡಿಯುತ್ತಿದ್ದೇವೆ~ ಎಂದು ಬೆಳ್ಳುಬ್ಬಿಯ ಶ್ರೀಕಾಂತ ರಾಮಚಂದ್ರ ಪತ್ತಾರ, ಅರಕೇರಿ ಗ್ರಾಮದ ಕೆಲವರು ಹೇಳಿದರು.ಅರ್ಜುಣಗಿ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ. 24 ತಿಂಗಳಲ್ಲಿ 12 ಜನ ಪಿಡಿಒಗಳ ವರ್ಗಾವಣೆಯಾಗಿದೆ. ಉದ್ಯೋಗ ಖಾತ್ರಿಗೆ ಬಿಡುಗಡೆಯಾಗಿದ್ದ ಒಂದು ಕೋಟಿ ರೂಪಾಯಿ ವಾಪಸ್ಸು ಹೋಗಿದೆ. ಆಶ್ರಯ ಮನೆಗಳ ಹಂಚಿಕೆ ಆಗಿಲ್ಲ ಎಂದು ಚನ್ನಪ್ಪ ಕೊಪ್ಪದ ದೂರಿದರು.ಎಪಿಎಂಸಿ ಮಾಜಿ ನಿರ್ದೇಶಕ ಕಾಂತು ಒಡೆಯರ, ಜೈನಾಪುರದ ಪ್ರಭುಸ್ವಾಮಿ ಹಿರೇಮಠ, ಬಸು ಹೊನವಾಡ, ಶಿವಾನಂದ ಹೊನವಾಡ, ಪೀರಗೊಂಡ ಗದ್ಯಾಳ, ಚನ್ನಪ್ಪ ದಳವಾಯಿ, ಮಿಟ್ಟು ರಾಠೋಡ ರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.