ಕೊಳವೆ ಸೋರಿಕೆ: ಸಮುದ್ರ ಸೇರಿದ ಡೀಸೆಲ್

ಗುರುವಾರ , ಜೂಲೈ 18, 2019
26 °C

ಕೊಳವೆ ಸೋರಿಕೆ: ಸಮುದ್ರ ಸೇರಿದ ಡೀಸೆಲ್

Published:
Updated:

ಗಾಂಧಿನಗರ (ಐಎಎನ್‌ಎಸ್): ಇಂಧನ ಸಾಗಿಸುವ ಕೊಳವೆಯು ಒಡೆದುಹೋದ ಪರಿಣಾಮ ಸುಮಾರು ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡೀಸೆಲ್ ಸೋರಿಕೆಯಾಗಿ ಸಮುದ್ರಕ್ಕೆ ಸೇರಿದ ಘಟನೆ ಗುಜರಾತ್‌ನ ಕಛ್ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ.ಹಲವು ದಿನಗಳ ಹಿಂದೆಯೇ ಕೊಳವೆ ಹಾನಿಗೊಳಗಾಗಿ ಡೀಸೆಲ್ ಸೋರಿಕೆಯಾಗುತ್ತಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಕೆ ನಂದಾ ಅವರು ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಗುಜರಾತ್ ಕಡಲತಡಿ ಮಂಡಲಿ ಮತ್ತು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಲಿ (ಜಿಪಿಸಿಬಿ)ಗಳಿಗೆ ಸೂಚನೆ ನೀಡಿದ್ದಾರೆ.ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪೆನಿಗೆ ಸೇರಿದ ಹಡಗು ಹೈ ಸ್ಪೀಡ್ ಡೀಸೆಲ್ ಅನ್ನು ಕೊಳವೆ ಮೂಲಕ ಪೂರೈಸುತ್ತಿದ್ದಾಗ ಕೊಳವೆ ಒಡೆದು ಸೋರಿಕೆಯಾಗಿದೆ. ಸುಮಾರು 1 ಲಕ್ಷ ಲೀಟರ್ ಡೀಸೆಲ್ ಸಮುದ್ರ ಪಾಲಾಗಿದೆ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry