ಸೋಮವಾರ, ಜೂನ್ 1, 2020
27 °C

ಕೊಳೆಗೇರಿ ಪ್ರದೇಶದಲ್ಲಿ ಬೆಳಗಲಿರುವ ಸೌರ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳೆಗೇರಿ ಪ್ರದೇಶದಲ್ಲಿ ಬೆಳಗಲಿರುವ ಸೌರ ದೀಪ

ಕ್ಯಾನ್‌ಬೆರಾ (ಐಎಎನ್‌ಎಸ್‌):  ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳ ಕೊಳೆಗೇರಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಸೌರಶಕ್ತಿಯ  ಲ್ಯಾಂಪ್‌ಗಳನ್ನು ನೀಡಲು ಆಸ್ಟ್ರೇಲಿಯಾದ  ಕಂಪೆನಿಯೊಂದು  ಮುಂದಾಗಿದೆ.ಬಡವರು ಹೆಚ್ಚಾಗಿ ವಾಸ ಮಾಡುವ ಕೊಳೆಗೇರಿ ಪ್ರದೇಶಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಅವರ ಆರೋಗ್ಯ ಸುಧಾರಿಸಬೇಕು ಎಂಬುದು ಕಂಪೆನಿಯ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸೌರಶಕ್ತಿಯ  ದೀಪಗಳನ್ನು ಬೆಳಗಿಸಲು ಕ್ರಮಕೈಗೊಂಡಿದೆ.ಆಸ್ಟ್ರೇಲಿಯಾದ ಐದು ಜನ ‘ಪೊಲ್ಲಿನೆಟ್‌ ಎನರ್ಜಿ’ ಎಂಬ ಕಂಪೆನಿ ಸ್ಥಾಪಿಸಿದ್ದು, ಇದು ಕೊಳಗೇರಿ ಪ್ರದೇಶಗಳಲ್ಲಿ   ವಾಸ ಮಾಡುವ ಜನರಿಗೆ ಸೌರಶಕ್ತಿಯ ಪೋರ್ಟಬಲ್‌ ಲ್ಯಾಂಪ್‌ಗಳನ್ನು ನೀಡಲಿದೆ.ಸೌರಶಕ್ತಿಯ ಈ ಲ್ಯಾಂಪ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಬಹುದು.   ಅಲ್ಲದೆ ಮೊಬೈಲ್‌  ಚಾರ್ಜ್‌ ಮಾಡಬಹುದಾಗಿದೆ. ಸೀಮೆಎಣ್ಣೆ ಬುಡ್ಡಿಗಳನ್ನು ಬಳಸುತ್ತಿರುವ ಎಂಟು ಸಾವಿರ ಮನೆಗಳಿಗೆ ಸೌರಶಕ್ತಿಯ ಲ್ಯಾಂಪ್‌ಗಳನ್ನು ಒದಗಿಸಲಾಗುತ್ತಿದೆ.‘ಸೀಮೆಎಣ್ಣೆ ಬುಡ್ಡಿ ಹಾಗೂ ಸ್ಟೌವ್‌ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗಿ ಸಾವು ಸಂಭವಿಸುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಮನೆಗಳಿಗೆ ಸೌರಶಕ್ತಿಯ ದೀಪಗಳನ್ನು ಒದಗಿಸಲಾಗುತ್ತಿದೆ’ ಎಂದು ಕಂಪೆನಿ ತಿಳಿಸಿದೆ.ಕಂಪೆನಿಯ ಸ್ಥಳೀಯ ಉದ್ಯೋಗಿಗಳು ಮನೆ ಮನೆಗೆ ತೆರಳಿ ಈ ದೀಪಗಳನ್ನು ಮಾರಾಟ ಮಾಡುತ್ತಾರೆ. ಈ ದೀಪದ ಬೆಲೆ  23 ಆಸ್ಟೇಲಿಯನ್‌ ಡಾಲರ್‌ (₹ 1,127).  ಕಂತುಗಳಲ್ಲೂ ಹಣ ಪಾವತಿಸಲು  ಅವಕಾಶ ಇದೆ. ಬೆಂಗಳೂರಿನಲ್ಲಿ  ಈಗಾಗಲೇ 7,000 ದೀಪಗಳು ಮಾರಾಟವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.