ಶುಕ್ರವಾರ, ಮೇ 14, 2021
32 °C

ಕೊಳೆಗೇರಿ ಮಕ್ಕಳಿಗೆ ವಿಶೇಷ ಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜೆಡಿಎಸ್‌ನ ಜಿಲ್ಲಾ ಮಹಿಳಾ ಘಟಕದವರು ಇಲ್ಲಿಯ ಕೊಳೆಗೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಸ್ನಾನ ಮಾಡಿಸುವ ಮೂಲಕ ಮದರ್ ಥೆರೆಸಾ ಜನ್ಮ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು ಇಲ್ಲಿಯ ಬಬಲೇಶ್ವರ ನಾಕಾ ಹತ್ತಿರದ ಅಡಕಿಗಲ್ಲಿಯ `ಗದ್ದಲತಿಪ್ಪಿ~ ಕೊಳಚೆ ಪ್ರದೇಶದಲ್ಲಿಯ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸಿದರು. ಸ್ವಚ್ಛತಾ ಅಭಿಯಾನ ನಡೆಸಿ ಕೊಳೆಗೇರಿ ನಿವಾಸಿಗಳಿಗೆ ಆರೋಗ್ಯದ ಅರಿವು ಮೂಡಿಸಿದರು.ಪ್ರತಿ ದಿನ ಮಕ್ಕಳಿಗೆ ಸ್ನಾನ ಮಾಡಿಸಬೇಕು. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವುದೇ ಆನಾರೋಗ್ಯ ಕಂಡು ಬಂದರೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ ಸಲಹೆ ನೀಡಿದರು.ಮದರ್ ಥೆರೆಸಾ ಅವರಿಗೆ ನಿಜವಾಗಿಯೂ ನಾವು ಗೌರವ ನೀಡಬೇಕಾದರೆ ಅವರಂತೆ ನಾವೆಲ್ಲ ಬಡವರು, ರೋಗಿಗಳ ಸೇವೆ ಮಾಡಬೇಕು. ಅವರ ಸೇವಾ ಮನೋಭಾವವನ್ನು ಸ್ವಲ್ಪ ಮಟ್ಟಿಗಾದರೂ ಮೈಗೂಡಿಸಿಕೊಳ್ಳಬೇಕು ಎಂದರು.ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳಾದ ಗುರುಬಾಯಿ ಹಿರೇಮಠ, ನಳಿನಿ ಅಂಬಲಿ, ಮಹಾದೇವಿ ಜಂಗಮಶೆಟ್ಟಿ, ರಜಾಕಬಿ ಬಾಗವಾನ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.