ಕೊಳೆತು ನಾರುವ ಕಲಾಸಿಪಾಳ್ಯ

7

ಕೊಳೆತು ನಾರುವ ಕಲಾಸಿಪಾಳ್ಯ

Published:
Updated:

ರಸ್ತೆಯ ಉದ್ದಗಲಕ್ಕೂ ಹೆಜ್ಜೆ ಇಡಲು ಸ್ಥಳವಿಲ್ಲದಂತೆ ಸಾಲು-ಸಾಲಾಗಿ ನಿಂತಿರುವ ನಗರ ಸಾರಿಗೆ ಹಾಗೂ ಕನಕಪುರ ವಿಭಾಗದ ಬಸ್ಸುಗಳು: ಇವುಗಳ ನಡುವೆ ನುಸುಳಿ ನುಗ್ಗಿ ಹೋಗುವುದೇ ಒಂದು ಪ್ರಯಾಸವೇ ಸರಿ! ಪಾದಚಾರಿಗಳ ಮಾರ್ಗದಲ್ಲಿ ಹೋಗಲು ಪ್ರಯತ್ನಿಸಿದರೆ ಅದೊಂದು ನರಕ. ರಾಶಿ-ರಾಶಿಯಾಗಿ ಬಿದ್ದಿರುವ ಪ್ಲಾಸ್ಟಿಕ್, ಚಿಂದಿ ಬಟ್ಟೆ ಬುತ್ತಿಗಳು, ಬಾಟಲುಗಳು, ಕೊಳೆತ ಕಸ-ಕಡ್ಡಿಗಳು, ಹಸುಗಳ ಸೆಗಣಿ, ಎಲ್ಲಂದರಲ್ಲಿ ವಿಸರ್ಜಿಸಿರುವ ಮಲಮೂತ್ರ, ಮತ್ತೆ ಇನ್ನೂ ಏನೇನೋ ಉಸಿರಿಡಿದು ಹೆಜ್ಜೆ ಇಡಬೇಕು, ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಪ್ರಯಾಣಿಕರು, ಸಾರ್ವಜನಿಕರು ನೆಮ್ಮದಿಯಾಗಿ ಉಸಿರಾಡಲು ಮಾಡುವರೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry