ಕೊಳೆತ ಶೇಂಗಾ: ಮಹಿಳೆ ಆತ್ಮಹತ್ಯೆ

7

ಕೊಳೆತ ಶೇಂಗಾ: ಮಹಿಳೆ ಆತ್ಮಹತ್ಯೆ

Published:
Updated:

ಪಾವಗಡ: ಕಟಾವು ಮಾಡಿದ ಶೇಂಗಾ ಮಳೆ ನೀರಿನಲ್ಲಿ ಕೊಳೆತ ವಿಚಾರ ತಿಳಿದು ಮನನೊಂದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಪಾರ್ವತಮ್ಮ (45) ಎಂದು ಗುರುತಿಸಲಾಗಿದೆ.ಸತತ ಮಳೆಯ ಕಾರಣ ಕೊಯ್ಲಾಗಿದ್ದ ಶೇಂಗಾ ಸಂಪೂರ್ಣ ಕೊಳೆತು ಹೋದ ವಿಚಾರವನ್ನು ಪತಿಯಿಂದ ತಿಳಿದು ನೊಂದುಕೊಂಡ ಆಕೆ ವಿಷಯವನ್ನು ಪಟ್ಟಣದ ತನ್ನ ಸಂಬಂಧಿಗೆ ತಿಳಿಸಿ ಬರುವುದಾಗಿ ಹೇಳಿ ಮನೆಬಿಟ್ಟು ತೆರಳಿದ್ದರು. ಆದರೆ ಮತ್ತೆ ಮನೆಗೆ ಬಾರದ ಕಾರಣ ಗಾಬರಿಗೊಂಡ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ಶನಿವಾರ ಇದೇ ಗ್ರಾಮದ ಸಾಕ್ಷಪ್ಪ ಎಂಬುವರ ಬಾವಿಯಲ್ಲಿ  ಪಾರ್ವತಮ್ಮ ಶವ ಪತ್ತೆಯಾಗಿದೆ. ಪಾವಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry