ಕೊಳೆಯುತ್ತಿರುವ ತೊಗರಿ!

ಬುಧವಾರ, ಜೂಲೈ 24, 2019
28 °C

ಕೊಳೆಯುತ್ತಿರುವ ತೊಗರಿ!

Published:
Updated:

ಅಫಜಲಪುರ: ರೈತರು ಹೆಚ್ಚಿನ ಬೆಲೆ ಪಡೆಯಲು ಕಳೆದ ವರ್ಷ ರಾಶಿ ಮಾಡಿರುವ ಸುಮಾರು 30 ಸಾವಿರ ಕ್ವಿಂಟಲ್ ತೊಗರಿಯನ್ನು ಗೋದಾಮಿನಲ್ಲಿ ಸಂಗ್ರಹವಾಗಿಟ್ಟಿದ್ದು, ಯೋಗ್ಯ ಬೆಲೆ ಬಾರದ ಕಾರಣ ಅವು ಹಾಗೆಯೇ ಉಳಿದಿದ್ದು, ಅವು ಕ್ರಮೇಣ ಕೊಳೆತು ಹೋಗುತ್ತಿವೆ ಎಂದು ತಿಳಿದು ಬಂದಿದೆ.ತಾಲ್ಲೂಕಿನಲ್ಲಿ ರೈತರು ಅಡತ್ ವ್ಯಾಪಾರಸ್ಥರ ಮೂಲಕ ತೊಗರಿ ಕಾಟಾ ಕೊಟ್ಟು, ಯೋಗ್ಯ ಬೆಲೆ ಬರುವವರೆಗೆ ಮಾರಾಟ ಮಾಡಬೇಡಿ ಎಂದು ಹೇಳಿದ್ದರು. ಆರಂಭದಲ್ಲಿ 4800 ರೂಪಾಯಿ ಬೆಲೆ ಇತ್ತು. ಜೂನ್ ತಿಂಗಳಲ್ಲಿ ಅದು 3000 ರೂಪಾಯಿಗಳಿಂದ 2000 ರೂಪಾಯಿಗಳವರೆಗೆ ಇಳಿದಿದೆ ಹೀಗಾಗಿ ರೈತರು ಆರಂಭದ ಬೆಲೆಯಲ್ಲಿಯೇ ತೊಗರಿ ಏಕೆ ಮಾರಲಿಲ್ಲ ಎಂದು ಚಿಂತಿಸುವಂತಾಗಿದೆ.ಬೆಲೆ ಇಳಿದಿದ್ದರಿಂದ ಪ್ರತಿಯೊಬ್ಬ ರೈತನಿಗೆ ಪ್ರತಿ ಕ್ವಿಂಟಲ್‌ಗೆ 2000 ರೂಪಾಯಿ ಹಾನಿಯಾಗುತ್ತಿದೆ. ಹೀಗಾಗಿ ರೈತ ಹೆಚ್ಚಿನ ಬೆಲೆ ಪಡೆಯಲು ಹೋಗಿ ಹಾಳಾಗಿ ಹೋಗಿದ್ದಾನೆ.ತೊಗರಿ ಮಾರಾಟ ಮಂಡಳಿ ಅಫಜಲಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ತೊಗರಿ ಖರೀದಿಗಾಗಿ ರೂ. 10 ಲಕ್ಷ ನೀಡಿತ್ತು. ಆದರೆ ಸಮಿತಿಯವರು ಒಂದು ಕಾಳು ತೊಗರಿ ಖರೀದಿ ಮಾಡಲಿಲ್ಲ. ಹೀಗಾಗಿ ರೈತ ತೊಗರಿಗೆ ಹೆಚ್ಚು ಬೆಲೆ ಪಡೆಯಲು ಹೋಗಿ ಹಾಳಾಗಿ ಹೋಗಿದ್ದಾನೆ. ಸದ್ಯಕ್ಕೆ ತೊಗರಿ ಬೆಲೆ ಇನ್ನೂ ಕಡಿಮೆಯಾಗುವ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ.ರೈತರು ತೊಗರಿಯನ್ನು ಗುಲ್ಬರ್ಗ, ಅಫಜಲಪುರ, ಮಹಾರಾಷ್ಟ್ರದ ಲಾತೂರ ಗೋದಾಮುಗಳಲ್ಲಿ ಸಂಗ್ರಹ ಮಾಡಿಟ್ಟಿದ್ದಾರೆ. ಕೇಂದ್ರ ಸರ್ಕಾರ ತೊಗರಿಗೆ ರೂ. 1200 ಬೆಂಬಲ ಘೋಷಣೆ ಮಾಡಿದೆ.ಇದರಿಂದ ಮತ್ತಷ್ಟು ತೊಗರಿ ಬೆಳೆಗಾರರಿಗೆ  ಮುಂದಿನ ದಿನಗಳಲ್ಲಿ ಸಂಕಷ್ಟ ಪಡುವಂತಾಗಿದೆ. ಅದಕ್ಕಾಗಿ ರೈತ ಮತ್ತೆ ಮುಂಗಾರು ಆರಂಭವಾದರೂ ಹೆಚ್ಚಿನ ಕ್ಷೇತ್ರಗಳಲ್ಲಿ ತೊಗರಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾನೆ ಎಂದು ಹೇಳಲಾಗುತ್ತದೆ.ರೈತರು ಅಲ್ಲದೆ ಅಡತ್ ವ್ಯಾಪಾರಸ್ಥರು ಸಾಕಷ್ಟು ತೊಗರಿಯನ್ನು ಕಡಿಮೆ ಬೆಲೆ ಖರೀದಿ ಮಾಡಿ ಗೋದಾಮುಗಳಲ್ಲಿ ಸಂಗ್ರಹ ಮಾಡಿದ್ದಾರೆ. ಅವರಿಗೂ ಬೆಲೆ ಇಳಿಕೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾಗುತ್ತಿದೆ.ಒಂದು ವರ್ಷದ ಹಿಂದೆ ಪ್ರತಿ ಕ್ವಿಂಟಲ್ ರೂ. 7000 ಬೆಲೆ ಇದ್ದು, ಇವತ್ತು ರೂ. 2000 ಕಡಿಮೆಯಾಗಿದ್ದರಿಂದ ರೈತ ತೊಗರಿ ಬೆಳೆ ಮೇಲಿನ ಆಸೆ ಕಡಿಮೆ ಮಾಡುತ್ತಿದ್ದಾನೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆಯಾಗಿದ್ದರಿಂದ ಭೀಮಾ ಏತ ನೀರಾವರಿ ಸೇರಿದಂತೆ ಭೀಮಾ ನದಿಗೆ ಇನ್ನೂ 4 ಬ್ಯಾರೇಜ್ ಆಗಿದ್ದರಿಂದ ಹೆಚ್ಚಿನ ಕ್ಷೇತ್ರದಲ್ಲಿ ಕಬ್ಬು ಬೆಳೆಯಲು ಮುಂದಾಗಿದ್ದಾರೆ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry