ಶನಿವಾರ, ಜೂನ್ 19, 2021
22 °C

ಕೊಳ್ಳೇಗಾಲ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ: ಪ್ರತಿಭಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ತಾಲ್ಲೂಕಿನ ಲಕ್ಷ್ಮಯ್ಯನ ದೊಡ್ಡಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರತಿಭಾ ತಿಳಿಸಿದರು.ಕೊಳ್ಳೇಗಾಲ ತಾಲ್ಲೂಕು ಕಚೇರಿ ಯಲ್ಲಿ ಲಕ್ಷ್ಮಯ್ಯನದೊಡ್ಡಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಶೋಧನಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರತಿಭಾ ಅವರು ಮಾತನಾಡಿದರು. ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರ ವರದಿ ಬಗ್ಗೆ ಅತೃಪ್ತಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸತ್ಯ ಘಟನೆ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ `ಸತ್ಯಶೋಧನಾ ಸಮಿತಿ” ರಚಿಸಿದ್ದಾರೆ ಎಂದು ಹೇಳಿದರು.ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಕೆಂಚಪ್ಪ ಮಾತನಾಡಿ, ದೌರ್ಜನ್ಯದಲ್ಲಿ ತೀವ್ರ ಗಾಯಗೊಂಡಿರುವವರ ಕುಟುಂಬಕ್ಕೆ ತಿಂಗಳಿಗೆ ತಲಾ 25 ಕೆ.ಜಿ. ಅಕ್ಕಿಯನ್ನು 3 ತಿಂಗಳವರೆಗೆ ನೀಡಲು, ಜಿಲ್ಲಾಡಳಿತದಿಂದ ರೂ.10ಸಾವಿರ ವಿತರಿಸಲಾಗಿದೆ.ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಕೊರತೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಅಂದಾಜು ತಯಾರಿಸಿ, ಪ್ರಸ್ತಾವನೆ ಸಲ್ಲಿಕೆಗೆ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.

 

ಈ ಜನತೆಗೆ ಗ್ರಾಮದಲ್ಲೇ ಪಡಿತರ ವಿತರಣೆ ಮತ್ತು ಸೀಮೆ ಎಣ್ಣೆಯನ್ನು ಮೊಬೈಲ್ ಯೂನಿಟ್ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ. ಮನೆಗಳನ್ನು ಕಳೆದುಕೊಂಡಿರುವವರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.ದೌರ್ಜನ್ಯ ಪ್ರಕರಣದಿಂದ ಗ್ರಾಮದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದು ಆತಂಕದಲ್ಲಿದ್ದಾರೆ. ಅವರಿಗೆ ದುಡಿಯಲು ಯಾವುದೇ ಅವಕಾಶ ಇಲ್ಲದಿರುವುದರಿಂದ ಸರ್ಕಾರದ ವತಿಯಿಂದ ತುಂಡುಭೂಮಿಯನ್ನು ವ್ಯವಸಾಯಕ್ಕೆ ದೊರಕಿಸಬೇಕು.

 

ಗ್ರಾಮದ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಸಿಗುವಂತೆ ಕ್ರಮ ಕೈಗೊಳ್ಳಬೇಕು ಇತ್ಯಾದಿ ಬೇಡಿಕೆಗಳನ್ನು ಮಾದಿಗ ಸಮುದಾಯ ಮುಖಂಡರು ಅಧಿಕಾರಿಗಳ ಮುಂದಿಟ್ಟರು.ತಹಶೀಲ್ದಾರ್ ಸುರೇಶ್‌ಕುಮಾರ್ ಮಾತನಾಡಿ, ಸತ್ಯಶೋಧನ ಸಮಿತಿ ಪರಿಶೀಲನೆ ನಡೆಸುವ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ. ಗ್ರಾಮಕ್ಕೆ ಸತ್ಯಶೋಧನ ಸಮಿತಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸತ್ಯವರದಿ ನೀಡಲಿದೆ ಎಂದು ತಿಳಿಸಿದರು.ವೃತ್ತ ನಿರೀಕ್ಷಕ ಕೆ.ಬಿ. ಜಯರಾಂ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಚಿಕ್ಕಬಸವಯ್ಯ, ವಕೀಲ ಮುತ್ತುರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಮಾದಿಗ ಸಮುದಾಯದ ಮುಖಂಡರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.