ಕೊಳ್ಳೇಗಾಲ: ಹನ್ನೊಂದು ದೇವಾಲಯ ನೆಲಸಮ

7

ಕೊಳ್ಳೇಗಾಲ: ಹನ್ನೊಂದು ದೇವಾಲಯ ನೆಲಸಮ

Published:
Updated:

ಕೊಳ್ಳೇಗಾಲ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ಮೂಲಕ ರಾಷ್ಟ್ರೀಯ ಹೆದ್ದಾರಿ ಮತ್ತು ಲೋಕೋಪಯೋಗಿ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 11 ದೇವಾಲಯಗಳನ್ನು ನೆಲಸಮಗೊಳಿಸಲಾಯಿತುಉಪ ವಿಭಾಗಾಧಿಕಾರಿ ಎ.ಬಿ. ಬಸವರಾಜು, ಡಿವೈಎಸ್‌ಪಿ ಮಹದೇವಯ್ಯ, ತಹಶೀಲ್ದಾರ್ ಡಾ.ವೆಂಕಟೇಶ್‌ಮೂರ್ತಿ, ನಗರಸಭೆ ಪೌರಾಯುಕ್ತ ನಾಗಭೂಷಣ್ ನೇತೃತ್ವದಲ್ಲಿ ಪೊಲೀಸ್ ಮತ್ತು ಅಧಿಕಾರಿಗಳ ನೆರವಿನೊಂದಿಗೆ ಮುಂಜಾನೆ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಪಟ್ಟಣದ ಹಳೇ ಕುರುಬಗೇ ರಿಯ ರಸ್ತೆ ಮಧ್ಯದಲ್ಲಿ ನಿರ್ಮಿಸ ಲಾಗಿದ್ದ ಬಿಸಿಲು ಮಾರಮ್ಮ ದೇವಾಲಯದ ತೆರವು ಕಾರ್ಯಾಚರಣೆ ಮೊದಲಿಗೆ ಪ್ರಾರಂಭವಾ ಯಿತು. ಜೆಸಿಬಿ ಯಂತ್ರ ಬಳಸಿ ದೇವಾಲಯ ನೆಲಸಮಗೊಳಿಸಲಾಯಿತು.ಸಾರ್ವಜನಿಕರಿಂದ ಯಾವುದೇ ಪ್ರತಿರೋಧ ಉಂಟಾಗದ ಕಾರಣ ಕಾರ್ಯಾಚರಣೆ ಬಿರುಸಿನಿಂದ ನಡೆಯಿತು. ರೇಷ್ಮೆ ವಿನಿಮಯ ಕೇಂದ್ರದ ಬಳಿಯ ಗಣಪತಿ ದೇವಾಲಯ, ಸಂತೆಪೇಟೆ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮುನೀಶ್ವರ ದೇವಾಲಯ, ರಾಷ್ಟ್ರೀಯ ಹೆದ್ದಾರಿಯ ಬಾಪೂನಗರದ ಬಳಿಯ ಶನೇಶ್ವರ ದೇಗುಲ ಹಾಗೂ ನವಗ್ರಹ ದೇವಾಲಯ, ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಉತ್ತಂಬಳ್ಳಿ ವೃತ್ತದಲ್ಲಿ ನಿರ್ಮಿಸಿದ್ದ ಗಣೇಶ ದೇವಾಲಯ ನೆಲಸಮಗೊಂಡಿವೆ. ಸೂರ್ಯನ ಕಿರಣ ಮೂಡುತ್ತಿದ್ದಂತೆಯೇ ಹೊರಬಂದ ಪಟ್ಟಣದ ಜನತೆಗೆ ದೇವಾಲಯ ಗಳ ದಿಢೀರ್ ಕಣ್ಮರೆ ಅಚ್ಚರಿ ಉಂಟು ಮಾಡಿತ್ತು.ಪ್ರತಿರೋಧ ಇಲ್ಲ: ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ದೇವಾಲಯ ತೆರವುಗೊಳಿಸಲು ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಯಾವುದೇ, ಪ್ರತಿರೋಧ ವ್ಯಕ್ತವಾಗಿಲ್ಲ ಎಂದು ಉಪ ವಿಭಾಗಾಧಿಕಾರಿ ಬಸವರಾಜು ತಿಳಿಸಿದರು. ಬಾಪೂನಗರ ಬಳಿಯ ಶನೇಶ್ವರ ಮತ್ತು ನವಗ್ರಹ ದೇವಾಲಯ ತೆರವು ಕಾರ್ಯಾಚರಣೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ದೇವಾಲಯಗಳ ಮಾಲೀಕರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿತ್ತು. ಅವರಿಗೆ ವಿಷಯ ಮನದಟ್ಟು ಮಾಡಿ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಅವರು ತಾವಾಗಿಯೇ ತೆರವಿಗೆ ಮುಂದಾಗದ ಕಾರಣ ಕಾರ್ಯಾ ಚರಣೆ ಮೂಲಕ ತೆರವುಗೊಳಿಸಲಾಗುತ್ತಿದೆ ಎಂದರು.ಕಾರ್ಯಾಚರಣೆ ಶಾಂತಿಯುತ: ಕೊಳ್ಳೇಗಾಲ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಏಕಕಾಲಕ್ಕೆ ದೇವಾಲಯ ತೆರವು ಕಾರ್ಯಾ ಚರಣೆ ಶಾಂತಿಯುತವಾಗಿ ನಡೆದಿದೆ ಎಂದು ಡಿವೈಎಸ್‌ಪಿ ಮಹದೇವಯ್ಯ ತಿಳಿಸಿದರು. ತಾಲ್ಲೂಕಿನ ಧನಗೆರೆ, ಬಂಡಳ್ಳಿ ಮತ್ತು ಲೊಕ್ಕನಹಳ್ಳಿ ವ್ಯಾಪ್ತಿಯ ಒಟ್ಟು 6 ದೇವಾಲಯ ತೆರವು ಕಾರ್ಯಾಚರಣೆ ನೇತೃತ್ವವನ್ನು ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿ ವಹಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಮತ್ತು ಉತ್ತಂಬಳ್ಳಿಯಲ್ಲಿ ಉಪ ವಿಭಾಗಾ ಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆ ಯುತ್ತಿದೆ ಎಂದರು.ಶಾಂತಿಯುತ ತೆರವು ಕಾರ್ಯಾಚರಣೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು. ಜಿಲ್ಲೆ ಯಾದ್ಯಂತ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಡಿಎಆರ್ ತುಕಡಿ ನಿಯೋಜಿಸಲಾಗಿತ್ತು. ಯಾವುದೇ, ಗೊಂದಲ ತಲೆದೋರಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry