ಕೊವರ್‌ಮನ್ಸ್‌ ವಿರುದ್ಧ ಟೀಕಾ ಪ್ರಹಾರ

7

ಕೊವರ್‌ಮನ್ಸ್‌ ವಿರುದ್ಧ ಟೀಕಾ ಪ್ರಹಾರ

Published:
Updated:

ಕೋಲ್ಕತ್ತ (ಪಿಟಿಐ):  ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾರತ ತಂಡ ಸೋಲು ಅನುಭವಿಸಿದ ಕಾರಣ ಕೋಚ್‌ ವಿಮ್‌ ಕೊವರ್‌ಮನ್ಸ್‌ ವಿರುದ್ಧ ಟೀಕಾ ಪ್ರಹಾರವೇ ಶುರುವಾಗಿದೆ. ‘ಆಫ್ಘಾನಿಸ್ತಾನ ಎದುರು ಭಾರತ ಸೋಲು ಕಂಡಿದ್ದು ಅಸಹನೀಯ. ಆದ್ದರಿ ಂದ ಇದನ್ನು ತನಿಖೆಗೆ ಒಳಪಡಿಸಬೇಕು. ಸಾಕಷ್ಟು ವೇತನದ ಜೊತೆಗೆ ಕೋಚ್‌ಗೆ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಅವರನ್ನು ಕೋಚ್‌ ಸ್ಥಾನದಿಂದ ತಗೆದು ಹಾಕಬೇಕು’ ಎಂದು ಒಲಿಂಪಿಯನ್‌ ಪಿ.ಕೆ. ಬ್ಯಾನರ್ಜಿ ಆಗ್ರಹಿಸಿದ್ದಾರೆ.‘ಆಟಗಾರರು ಪಂದ್ಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನೇಪಾಳ ಎದುರಿನ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಭಾರತ ಒಂದು ಗೋಲಿನಿಂದ ಹಿನ್ನಡೆಯಲ್ಲಿದ್ದಾಗ ಪಂದ್ಯವನ್ನು ನೋಡುವುದನ್ನು ನಿಲ್ಲಿಸಿಬಿಟ್ಟೆ’ ಎಂದೂ ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ.‘ನಾಯಕ ಸುನಿಲ್‌ ಚೆಟ್ರಿ ಅವರನ್ನು ಮೊದಲ ಇಲೆವೆನ್‌ನಲ್ಲಿ ಏಕೆ ಕಣಕ್ಕಿಳಿ­ಸಲಿಲ್ಲ. ಇದು ಸಹ ಭಾರತದ ಸೋಲಿಗೆ ಕಾರಣವಾಯಿತು. ಕೋಚ್‌ ತಗೆದು­ಕೊಂಡು ಕೆಟ್ಟ ನಿರ್ಧಾರ ಇದು. ಇದರ ಹೊಣೆ ಕೊವರ್‌ಮನ್ಸ್‌ ಹೊತ್ತುಕೊ­ಳ್ಳಬೇಕು’ ಎಂದು ಮಾಜಿ ಆಟಗಾರ ಚೂನಿ ಗೋಸ್ವಾಮಿ ಹೇಳಿದ್ದಾರೆ.ಕಾಬೂಲ್‌ ವರದಿ: ಭಾರತದಲ್ಲಿ ಕೋಚ್‌ ವಿರುದ್ಧ ಟೀಕೆಯ ಮಳೆಯೇ ಸುರಿಯುತ್ತಿದ್ದರೆ ಚಾಂಪಿಯನ್‌ ಅಫ್ಘಾನಿಸ್ತಾನಕ್ಕೆ ಪ್ರಶಂಸೆಯೇ ಮಹಾಪೂರವೇ ಹರಿದು ಬರುತ್ತಿದೆ.

10 ಸ್ಥಾನ ಕುಸಿದ ಭಾರತ

ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಲು ಕಂಡ ಪರಿಣಾಮ ರಾ್ಯಾಂಕಿಂಗ್‌ ಮೇಲೂ ಬೀರಿದೆ. ಫಿಫಾ ರಾ್ಯಾಂಕ್‌ನಲ್ಲಿ ಭಾರತ ಹತ್ತು ಸ್ಥಾನ ಕುಸಿತ ಕಂಡಿದೆ. ಚಾಂಪಿಯನ್‌ಷಿಪ್‌ಗೆ ಮೊದಲು ಭಾರತ 145ನೇ ಸ್ಥಾನ ಹೊಂದಿತ್ತು. ಈಗ 155ನೇ ಸ್ಥಾನಕ್ಕೆ ಇಳಿ­ದಿದೆ. ಚೊಚ್ಚಲ ಸ್ಯಾಫ್‌ ಕಪ್‌ ಜಯಿಸಿರುವ ಆಫ್ಘಾನಿಸ್ತಾನ 139ನೇ ಸ್ಥಾನದಿಂದ 132ನೇ ಸ್ಥಾನಕ್ಕೆ ಜಿಗಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry