ಶುಕ್ರವಾರ, ಏಪ್ರಿಲ್ 23, 2021
31 °C

ಕೊಸೊವೊ ದುಷ್ಕರ್ಮಿಯಿಂದ ಗುಂಡಿನ ಮಳೆ.ಜರ್ಮನಿ:ಅಮೆರಿಕ ಯೋಧರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ರಾಂಕ್‌ಫರ್ಟ್ (ಜರ್ಮನಿ) (ಎಪಿ): ಸಶಸ್ತ್ರಧಾರಿಯೊಬ್ಬ ಇಲ್ಲಿನ ವಿಮಾನ ನಿಲ್ದಾಣದ ಹೊರಗೆ ಅಮೆರಿಕ ವಾಯುಪಡೆಯ ಇಬ್ಬರು ಸಿಬ್ಬಂದಿಗಳನ್ನು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ದುಷ್ಕರ್ಮಿಯನ್ನು ಬಂಧಿಸಿದ್ದು, ಆತ ಕೊಸೊವೊ ನಾಗರಿಕ ಎಂದು ಫ್ರಾಂಕ್‌ಫರ್ಟ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.ವಿಮಾನ ನಿಲ್ದಾಣದ ಹೊರಗಿರುವ ಬಸ್ ಟರ್ಮಿನಲ್‌ನಲ್ಲಿ ನಿಂತಿದ್ದ ಬಸ್ಸಿನ ಮೇಲೆಯೇ ದುಷ್ಕರ್ಮಿ ಗುಂಡಿನ ಮಳೆಗರೆದಿದ್ದರಿಂದ ಅಮೆರಿಕದ ಅವರಿಬ್ಬರು ಸ್ಥಳದಲ್ಲೇ ಸತ್ತಿದ್ದು, ಬಸ್ಸಿನ ಚಾಲಕ ಮತ್ತು ಇನ್ನೊಬ್ಬ ಪ್ರಯಾಣಿಕ ಕೂಡಾ ಸತ್ತಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.ಈ ನಡುವೆ ಅಮೆರಿಕ ವಾಯುಪಡೆಯ ಯೂರೋಪ್ ವಲಯದ ವಕ್ತಾರೆ ಬೆವರ್ಲಿ ಮೊಕ್ ಪ್ರಕಾರ ಸತ್ತ ನಾಲ್ವರೂ ವಾಯುಪಡೆಗೆ ಸೇರಿದವರು. ಕೊಸೊವೊ ದೇಶದ ಆಂತರಿಕ ವ್ಯವಹಾರಗಳ ಸಚಿವ ಬಜ್ರಮ್ ರೆಕ್ಷೇಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ ‘ಜರ್ಮನಿ ಪೊಲೀಸರು ಪತ್ತೆ ಹಚ್ಚಿರುವ ದುಷ್ಕರ್ಮಿಯು ಕೊಸೊವೊದ ಉತ್ತರ ಭಾಗದಮಿಟ್ರೊವಿಕಾ ಪಟ್ಟಣದ ನಿವಾಸಿ ಆರೀಫ್ ಉಕಾ’ ಎಂದು ಖಚಿತ ಪಡಿಸಿದ್ದಾರಲ್ಲದೆ ‘ಇದೊಂದು ಖಂಡನಾರ್ಹ ಪ್ರಕರಣ’ ಎಂದಿದ್ದಾರೆ.ಒಬಾಮ ಅಸಮಾಧಾನ:
ಈ ಘಟನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.ಹೆಸ್ಸೆ ಪ್ರಾಂತ್ಯದ ಆಂತರಿಕ ವ್ಯವಹಾರಗಳ ಸಚಿವ ಬೋರಿಸ್ ರೇನ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇದು ಭಯೋತ್ಪಾದಕರ ಸಂಘಟಿತ ಕೃತ್ಯವಂತೂ ಅಲ್ಲ.ತಕ್ಷಣದ ತನಿಖೆಯಿಂದ ಗೊತ್ತಾಗಿದ್ದು ಏನೆಂದರೆ 21ರ ಹರೆಯದ ದುಷ್ಕರ್ಮಿ ಆರೀಫ್ ಹಿಂದೆ ಇಸ್ಲಾಂ ಉಗ್ರಗಾಮಿ ಸಂಘಟನೆಯೊಂದರ ಸದಸ್ಯನಾಗಿದ್ದನಾದರೂ, ಪ್ರಸಕ್ತ ಆತನಿಗೆ ಯಾವುದೇ ಭಯೋತ್ಪಾದಕ ಸಂಘಟನೆಗಳ ಜತೆಗೆ ಸಂಬಂಧವಿಲ್ಲ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.