ಕೋಕಮ್ ವಿಶೇಷ

7

ಕೋಕಮ್ ವಿಶೇಷ

Published:
Updated:
ಕೋಕಮ್ ವಿಶೇಷ

ಪಾನಕ

ಬೇಕಾಗುವ ಪದಾರ್ಥಗಳು: ನೆನೆಸಿದ ಅಮ್‌ಸೋಲೆ. ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಸಕ್ಕರೆ, ಸ್ವಲ್ಪ ಉಪ್ಪು ಮತ್ತು ಜೀರಿಗೆ 2 ಚಮಚ, ಮೆಣಸು 1 ಚಮಚ ಪ್ರಮಾಣದಲ್ಲಿ ಸೇರಿಸಿ ಮಾಡಿಟ್ಟುಕೊಂಡ ಪುಡಿ.ಮಾಡುವ ವಿಧಾನ: ನೆನೆಸಿದ ಅಮ್‌ಸೋಲ್ ಕಿವುಚಿ ರಸ ತೆಗೆದು ಶೋಧಿಸಿಕೊಳ್ಳಿ. ಆ ರಸಕ್ಕೆ ಬೆಲ್ಲ, ಉಪ್ಪು ತಯಾರಿಸಿಟ್ಟುಕೊಂಡ ಪುಡಿ ಹದವಾಗಿ ಹಾಕಿ ತಕ್ಕಷ್ಟು ನೀರು ಬೆರೆಸಿ ಸೇವಿಸಿ.

ಪಿತ್ತನಾಶಕ್ಕೆ ಗುಳಿಗೆ

ಬೇಕಾಗುವ ಪದಾರ್ಥಗಳು
: 100 ಗ್ರಾಂ ಅಮ್‌ಸೋಲೆ ನೆನೆಸಿದ್ದು, 2 ಚಮಚ ಗಸಗಸೆ ಪುಡಿ, 1 ಚಮಚ ಒಣಶುಂಠಿ, 1 ಚಮಚ ಕಲ್ಲುಸಕ್ಕರೆ ಪುಡಿ, 2 ಚಮಚ ಏಲಕ್ಕಿ ಪುಡಿ, 2 ಚಮಚ ಬಡೇಸೋಂಪಿನ ಪುಡಿ, 2 ಚಮಚ ಜೇಷ್ಠಮಧುವಿನ ಪುಡಿ.ಮಾಡುವ ವಿಧಾನ: ನೆನೆಸಿಟ್ಟ ಅಮ್‌ಸೋಲನ್ನು ರುಬ್ಬಿ, ನುಣ್ಣಗೆ ಪೇಸ್ಟ್ ಮಾಡಿ, ಬಾಂಡ್ಲೆಗೆ ಹಾಕಿ ಮಗುಚಬೇಕು. ಸ್ವಲ್ಪ ನೀರು ಇಂಗಿದ ನಂತರ ಗಸಗಸೆ, ಒಣಶುಂಟಿ, ಕಲ್ಲುಸಕ್ಕರೆ, ಏಲಕ್ಕಿ ಬಡೇಸೊಂಪು, ಜೇಷ್ಠಮಧುವಿನ ಪುಡಿಗಳನ್ನು ಹಾಕಿ ಮಗುಚಬೇಕು (ಕೈಯಾಡಿಸಿ) ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಗಾಜಿನ ಬಾಟ್ಲಿಗೆ ಹಾಕಿಡಿ. ಕೆಮ್ಮು, ನೆಗಡಿಗೆ, ಪ್ರಯಾಣದ ತೊಂದರೆಗಳಿಗೆಲ್ಲಾ ಒಳ್ಳೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry