ಕೋಕೊಗೆ ಕೊಳೆ ರೋಗ

ಬುಧವಾರ, ಮೇ 22, 2019
24 °C

ಕೋಕೊಗೆ ಕೊಳೆ ರೋಗ

Published:
Updated:

ಕೋಕೊಗೆ ಈಗ ಉತ್ತಮ ಧಾರಣೆ ಸಿಗುತ್ತಿದೆ. ಆದರೆ ಬೆಳೆಗಾರರು ಕಂಗೆಟ್ಟಿದ್ದಾರೆ. ಈ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಜಡಿಮಳೆ ಪರಿಣಾಮ ಬಹುತೇಕ ಕೋಕೊ ಗಿಡಗಳಲ್ಲಿ  ಕೊಳೆ ರೋಗ ಕಾಣಿಸಿಕೊಂಡಿದೆ. ಶೇ.75 ರಷ್ಟು ಬೆಳೆ ನೆಲಕಚ್ಚಿದೆ.ಮಲೆನಾಡು ಹಾಗೂ ಕರಾವಳಿಯ ಅಡಿಕೆ, ತೆಂಗಿನ ತೋಟಗಳಲ್ಲಿ ಕೋಕೊ ಗಿಡಗಳನ್ನು ಕಾಣಬಹುದು. ಮಳೆಗಾಲದಲ್ಲಿ ರೈತರಿಗೆ ಕೋಕೊ ಉತ್ತಮ ಆದಾಯ ತಂದು ಕೊಡುತ್ತದೆ. ಅಡಿಕೆ ಸುಗ್ಗಿ ಮುಗಿದ ಈ ಸಮಯದಲ್ಲಿ ರೈತರ ದೈನಂದಿನ ಖರ್ಚುಗಳನ್ನು ಕೋಕೊ ಮಾರಾಟದಿಂದ ಬಂದ ಹಣದಿಂದ ಸರಿದೂಗಿಸುತ್ತಾರೆ.ಕೋಕೊ ಹಸಿ ಬೀಜಕ್ಕೆ ಕೇಜಿಗೆ 40ರೂ ಬೆಲೆ ಇದೆ. ಬೆಲೆ ಇದ್ದರೂ ಈಗ ಬೆಳೆ ಇಲ್ಲ.

ಕೋಳೆರೋಗ ಪೀಡಿತ ಗಿಡಗಳಲ್ಲಿ ಕಾಯಿಗಳಲ್ಲಿ ಬೆಳವಣಿಗೆ ಸಮರ್ಪಕವಾಗಿಲ್ಲ. ಎಳೆ ಕಾಯಿಗಳು ಬಲಿಯದೆ ಕಪ್ಪಾಗಿ ಕ್ರಮೇಣ ಒಣಗುತ್ತವೆ. ಇವು ತೊಟ್ಟು ಕಳಚಿ ಕೆಳಗೆ ಉದುರುವುದಿಲ್ಲ.

 

ಗಿಡದಲ್ಲಿ ಬಲಿತ ಕಾಯಿಗಳೂ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇಂತಹ ಕಾಯಿಗಳಿಂದ ಬೀಜ ಬೇರ್ಪಡಿಸುವುದು ಕಷ್ಟ.ಬಹುತೇಕ  ಬೀಜಗಳು ಜಳ್ಳಾಗಿವೆ. ರೋಗ ಉಲ್ಬಣಗೊಂಡರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ. ಕೊಂಬೆಗಳು ಸಾಯುತ್ತವೆ.ಕಳೆದ ವರ್ಷ ಮಳೆಗಾಲದಲ್ಲಿ ವಾರಕ್ಕೊಮ್ಮೆ 2 ಕ್ವಿಂಟಲ್ ಕೋಕೊ ಪಡೆಯುತ್ತಿದ್ದ ಮಡಿಕೇರಿ ತಾಲೂಕಿನ ಅರೆಕಲ್ಲು  ಗ್ರಾಮದ ರೈತ ಲೈನ್ಕಜೆ ಕೃಷ್ಣಭಟ್ ಅವರಿಗೆ ಈ ಸಲ 50 ಕೆ.ಜಿ.ಯಷ್ಟು ಇಳುವರಿ ಸಿಕ್ಕಿದೆ. ಇಳುವರಿ ಕುಸಿತದಿಂದ ಅವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅವರೊಬ್ಬರೇ ಅಲ್ಲ ಇಂಥ ಹಲವು ರೈತರಿದ್ದಾರೆ.ಕೋಳೆ ರೋಗ ಒಂದು ಬಗೆಯ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಶಿಲೀಂದ್ರವು ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಳ್ಳುತ್ತದೆ. ನಾಲೈದು ದಿನಗಳಲ್ಲಿ ಶಿಲೀಂದ್ರದ ಪ್ರಮಾಣ ಹೆಚ್ಚಾಗಿ ರೋಗ ಹರಡುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ, ತೇವಾಂಶದ ವಾತಾವರಣ ಈ ರೋಗ ಹರಡಲು ಅನುಕೂಲ ಕಲ್ಪಿಸುತ್ತದೆ. ಮಳೆಗಾಲ ಆರಂಭದ ಸಮಯದಲ್ಲಿ ಅಡಿಕೆ ಮರಗಳಿಗೆ ಸಿಂಪಡಿಸುವಂತೆ ಕೋಕೊ ಗಿಡಗಳಿಗೆ ಗೆ ಬೋರ್ಡೋ ದ್ರಾವಣ ಸಿಂಪಡಿಸುವುದೇ ಇದಕ್ಕೆ ಪರಿಹಾರ. ಈ ಸಲ ವಿಪರೀತ ಮಳೆ ಮತ್ತು ಕಾರ್ಮಿಕರ ಅಭಾವದಿಂದ ಸಿಂಪಡಣೆಗೆ ಅಡ್ಡಿಯಾಗಿದೆ. ರೋಗ ಬಂದ ಮೇಲೆ ಅದನ್ನು ನಿಯಂತ್ರಿಸುವುದು ಕಷ್ಟ ಎನ್ನುತ್ತಾರೆ ಪುತ್ತೂರಿನ ಕೋಕೊ ಬೆಳೆಗಾರ ಕೆದಿಲ ಕೃಷ್ಣಮೂರ್ತಿ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry