ಶುಕ್ರವಾರ, ಡಿಸೆಂಬರ್ 6, 2019
19 °C

ಕೋಚ್ ಹುದ್ದೆ ತ್ಯಜಿಸಿದ ಡೇವ್ ವಾಟ್ಮೋರ್

Published:
Updated:
ಕೋಚ್ ಹುದ್ದೆ ತ್ಯಜಿಸಿದ ಡೇವ್ ವಾಟ್ಮೋರ್

ಕೋಲ್ಕತ್ತ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಸ್ಪರ್ಧೆಯಲ್ಲಿರುವ ಡೇವ್ ವಾಟ್ಮೋರ್ ಐಪಿಎಲ್ ತಂಡ ಕೋಲ್ಕತ್ತ ನೈಟ್ ರೈಡರ್ಸ್‌ನ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.ವಾಟ್ಮೋರ್ ಕಳೆದ ಎರಡು ಋತುಗಳಲ್ಲಿ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸುಧಾರಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಕೋಲ್ಕತ್ತ ತಂಡ ಕಳೆದ ಋತುವಿನ ಟೂರ್ನಿಯಲ್ಲಿ ನಾಕೌಟ್ ಹಂತ ಪ್ರವೇಶಿಸಿತ್ತು. ಅದೇ ರೀತಿ ಚಾಂಪಿಯನ್ಸ್ ಲೀಗ್ ಟ್ವೆಂಟಿ- 20 ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿತ್ತು.`ನೈಟ್ ರೈಡರ್ಸ್ ತಂಡ ಸರಿಯಾದ ದಿಕ್ಕಿನಲ್ಲಿ ಮುನ್ನಡೆದಿದೆ. ಈ ತಂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆದು 2012 ರಲ್ಲಿ ಚಾಂಪಿಯನ್‌ಪಟ್ಟ ತನ್ನದಾಗಿಸಲಿ ಎಂಬ ಹಾರೈಕೆ ನನ್ನದು. ನನಗೆ ಬೆಂಬಲ ನೀಡಿದ ಹಾಗೂ ನನ್ನ ಮೇಲೆ ನಂಬಿಕೆಯನ್ನಿಟ್ಟ ಎಲ್ಲರಿಗೂ ಕೃತಜ್ಞತೆಗಳು~ ಎಂದು ಪ್ರಕಟಣೆಯಲ್ಲಿ ವಾಟ್ಮೋರ್ ತಿಳಿಸಿದ್ದಾರೆ.ವಾಟ್ಮೋರ್ ಪಾಕ್ ರಾಷ್ಟ್ರೀಯ ತಂಡದ ಕೋಚ್ ಹುದ್ದೆ ಅಲಂಕರಿಸಲು ಉತ್ಸುಕರಾಗಿದ್ದಾರೆ. ಈ ಕುರಿತು ಜನವರಿ ಎರಡನೇ ವಾರದಲ್ಲಿ ಮಾತುಕತೆಗೆ ಆಗಮಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರಿಗೆ ಸೂಚಿಸಿದೆ. ವಾಟ್ಮೋರ್ ಹುದ್ದೆ ತ್ಯಜಿಸಿರುವುದನ್ನು ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಖಚಿತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)