ಶನಿವಾರ, ಜನವರಿ 18, 2020
20 °C

ಕೋಟಿಬಿಲ್ವಕ್ಕೆ ಸಜ್ಜುಗೊಂಡ ಗಂವ್ಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ:  ತಾಲ್ಲೂಕಿನ ಸುಕ್ಷೇತ್ರ ಗಂವ್ಹಾರ ಕೋಟಿಬಿಲ್ವ ಕಾರ್ಯಕ್ರಮಕ್ಕೆ ಸಂಪೂರ್ಣ ಸಜ್ಜುಗೊಂಡಿದೆ. ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.ಜ.17ರಿಂದ ಆರಂಭವಾದ ಕಾರ್ಯಕ್ರಮ 21ರವರೆಗೆ ನಡೆಯುತ್ತಿದೆ. ಸಂಸ್ಥಾನ ಗೋಕರ್ಣ ಮತ್ತು ರಾಮಚಂದ್ರಾಪುರಮಠದ ಜಗದ್ಗುರು ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಸಾನಿಧ್ಯದಲ್ಲಿ ಕೋಟಿಬಿಲ್ವ ಕಾರ್ಯಕ್ರಮ ಜರುಗಲಿದೆ. ಗಂವ್ಹಾರ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಸದ್ಗುರು ಸೋಪಾನನಾಥ ಸ್ವಾಮೀಜಿಯವರ ಸಂಕಲ್ಪ ಮತ್ತು ನೇತೃತ್ವದಲ್ಲಿ ಅನೇಕ, ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿವೆ.ಶ್ರೀಮಠ ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ.

ಕೋಟಿಬಿಲ್ವ ಕಾರ್ಯಕ್ರಮಕ್ಕೆ ಶ್ರೀಮಠದ ಹಿಂದೆ ಬೃಹದಾದ ವೇದಿಕೆ ನಿರ್ಮಿಸಲಾಗಿದೆ. ಸುಮಾರು 10 ಸಾವಿರ ಜನ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೇವರ್ಗಿಯಿಂದ ಗಂವ್ಹಾರಕ್ಕೆ ಈಶಾನ್ಯ ಸಾರಿಗೆ ಸಂಸ್ಥೆಯವರು 7 ಬಸ್‌ಗಳನ್ನು ಬಿಟ್ಟಿದ್ದಾರೆ.ಜ.20ರಂದು ನಡೆಯುವ ಶಿವಸಂದೇಶ ಸಭಾ ಮತ್ತು ಜ.21ರಂದು ನಡೆಯುವ ಕೋಟಿಬಿಲ್ವ ಪರಶಿವನ ಪರಮಾರಾಧನೆ ಎಂಬ ಕಾರ್ಯಕ್ರಮಕ್ಕೆ ಸುಮಾರು 1ಲಕ್ಷಜನ ಸೇರುವ ನಿರೀಕ್ಷೆಯಿದೆ.ಮಂಗಳವಾರ ಸಂಜೆ 7ಗಂಟೆಗೆ ರಾಮಚಂದ್ರಾಪುರ ಮಠದ ಜಗದ್ಗುರು ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಆನೆ ಮೇಲೆ ಹಾಗೂ ಗಂವ್ಹಾರ ತ್ರಿವಿಕ್ರಮಾನಂದ ಸರಸ್ವತಿ ಮಠದ ಸೋಪಾನನಾಥ ಸ್ವಾಮೀಜಿಯವರನ್ನು ಕುದುರೆ ಸಾರೋಟಿನಲ್ಲಿ ಕೂಡಿಸಿ ಶಿವಶೋಭಾ ಯಾತ್ರೆ ನಡೆಸಲಾಯಿತು.

ಪ್ರತಿಕ್ರಿಯಿಸಿ (+)