ಶುಕ್ರವಾರ, ಏಪ್ರಿಲ್ 16, 2021
31 °C

ಕೋಟಿ ಆಸ್ತಿಗಿಂತ ತುತ್ತುಅನ್ನ ಶ್ರೇಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಕೋಟಿ ಆಸ್ತಗಿಂತ ತುತ್ತುಅನ್ನ ಶ್ರೇಷ್ಟ ಎಂದು ವಿಜಾಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮಿ ನುಡಿದರು. ತಾಲ್ಲೂಕಿನ ಬಸವತೀರ್ಥ ಶ್ರೀಮಠದ ಲಿಂ.ಸಿದ್ದಬಸವೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಅವರು ಆಧ್ಯಾತ್ಮ ಪ್ರವಚನ ನೀಡಿದರು.ಲಜ್ಞಾಂತರ ವೆಚ್ಚದಲ್ಲಿ ಭಾರೀ ಮಹಲು ಕಟ್ಟಿಸಿದ ಅದೆಷ್ಟೊ ಹಣವಂತರ ಮನಸ್ಸು ಗುಡಿಸಲು ವಾಸಿಗಿಂತ ಕೀಳಾಗಿರುತ್ತದೆ. ಆದರೇೊಬ್ಬ ಬಡವ ತಾನು ಗುಡಿಸಲಲ್ಲಿ ನೆಲೆಸಿದರು ಚಿಂತೆಯಿಲ್ಲ. ಹಸಿದವರಿಗೆ ತುತ್ತು ಅನ್ನನೀಡಿ ಬದುಕು ಸಾರ್ಥಕ ಗೊಳಿಸಿಕೊಳ್ಳುತ್ತಾನೆ. ‘ಮನೆ ಬಡವಾದರೇನು ಮನಸ್ಸು ಶ್ರೀಮಂತವಾಗಿರಬೇಕು’ ಎಂದು ಶರಣರು ಅದನ್ನೇ ಹೇಳಿದ್ದರು ಎಂದು ಶ್ರೀಗಳು ವಿವರಿಸಿದರು.ಆ ಕುರ್ಚಿ ಗತಿ ಏನಾಗಿರಬೇಡ?: ಒಂದು ತಾಸಿನ ಆಧ್ಯಾತ್ಮ ಪ್ರವಚನಕ್ಕಾಗಿ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಂಡ ನೀವು ಇನ್ನೊಬ್ಬರಿಗೆ ಕೊಡದೇ ಕುಳಿತಿರಬೇಕಾದರೆ, ವಿವಿಧ ಆಸೆಗಳಿಗೆ ಮೂಲವಾದ ಆ ಕುರ್ಚಿಯಲ್ಲಿ ಕುಳಿತವರು ಗತಿ ಏನಾಗಿರಬೇಡ? ಎಂದು ಪ್ರಸ್ತುತ ರಾಜಕೀಯ ಸ್ಥಿಗತಿಯ ಕುರಿತು  ಸೂಚ್ಯವಾಗಿ ನುಡಿದರು.ಚಂಚಲ ಮನಸ್ಸುಳ್ಳ ವ್ಯಕ್ತಿಯಿಂದ ಯಾವುದೇ ಪ್ರಗತಿ ನಿರೀಕ್ಷಿಸಲಾಗದು. ಸ್ಥಿರ ಹಾಗೂ ಸರಳ ಸ್ವಭಾವದ ಬುದ್ದಿಯುಳ್ಳವರು ಸಮಾಜದ ಪರಿವರ್ತನೆ ಮಾಡಬಲ್ಲರು ಎಂದು ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ.ಜ್ಞಾನರಾಜ ಮಹಾರಾಜರು ನುಡಿದರು. ಮಹಾತ್ಮಾ ಬಸವೇಶ್ವರರು ಸೇರಿದಂತೆ ಎಲ್ಲ ಮಹಾತ್ಮರು ಸತ್ಸಂಗ ಹಾಗೂ ಸದಾಚರಕ್ಕೆ ಆದ್ಯತೆ ನೀಡಿದ್ದಾರೆ ಎಂದು ಶ್ರೀಗಳು ವಿವರಿಸಿದರು. ಆಧ್ಯಾತ್ಮ ದಾಸೋಹ ಏರ್ಪಡಿಸಿದ ಶ್ರೀಮಠದ ಕಾರ್ಯವನ್ನು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಶ್ಲಾಘಿಸಿದರು.ಹುಮನಾಬಾದ್‌ನಲ್ಲಿ ಮಾಸ ಪೂರ್ಣ ಪ್ರವಚನ ನಡೆಸಿಕೊಡುವಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಹುಮನಾಬಾದ್ ನಾಗರಿಕರ ಪರವಾಗಿ ಮನವಿ ಮಾಡಿದರು.ಶಾಸಕ ರಾಜಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಆನಂದರಾಜಶ್ರೀ ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಗಣ್ಯರಾದ ಬಸವರಾಜ ಆರ್ಯ, ಸುಭಾಷ ಅಷ್ಟಿಕರ, ಶಿವರಾಜ ಗಂಗಶೆಟ್ಟಿ, ಪ್ರಣವಾನಂದಶ್ರೀ, ಡಾಕುಳಗಿಶ್ರೀ, ಮಾತೆ ಮೈತ್ರಾದೇವಿ, ಅಲ್ಲದೇ ವಿವಿಧ ಮಠಾಧಿಶರು ಇದ್ದರು. ಡಾ.ಎಸ್.ಎಸ್.ಯಾಳವಾರ ನಿರೂಪಿಸಿದರು. ಡಾ. ಸಿದ್ದಲಿಂಗ ಸ್ವಾಮಿಜಿ ಪ್ರಾಸ್ತಾವಿಕ ಮಾತನಾಡಿದರು. ಕಾಶಿನಾಥ ಗಿರಿಮಲ್ ವಂದಿಸಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.