ಶುಕ್ರವಾರ, ಮೇ 7, 2021
25 °C

ಕೋಟಿ ಖರ್ಚಾದರೂ ತಪ್ಪದ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಇಲ್ಲಿನ ಪುರಸಭೆಗೆ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದರೂ ಬೆಳಗಾದರೆ ವಾರ್ಡ್ ನಾಗರಿಕರು ತೊಂದರೆ ಪಡುವುದು ಮಾತ್ರ ತಪ್ಪುತಿಲ್ಲ.ಮೊಮಿನ್‌ಪೂರ, ಭಗತ್‌ಸಿಂಗ್ ಓಣಿ, ಬಸವೇಶ್ವರ ವಾರ್ಡ್, ಅಶೋಕ ವಾರ್ಡ್, ಗೌತಮ ವಾರ್ಡ್ ಮೂಲಕ ಹೊಸ ಬಸ್‌ನಿಲ್ದಾಣದ ಮುಂದಿನ ಹಳ್ಳಕ್ಕೆ ಸೇರಬೇಕಾದ ಚರಂಡಿ ನೀರು ಪುರಸಭೆಯ ನಿರ್ಲಕ್ಷ್ಯದಿಂದ ಗೌತಮ ವಾರ್ಡ್‌ಗೆ ಹೋಗುವ ರಸ್ತೆಯಲ್ಲಿ ಚರಂಡಿ ಒಡೆದು ವರ್ಷ ಸಮೀಪಿಸುತ್ತಿದ್ದರೂ ಇದುವರಿಗೂ ದುರಸ್ತಿಗೆಗೆ ಮುಂದಾಗದ ಕಾರಣ ಇಡೀ ಚರಂಡಿ ನೀರು ರಸ್ತೆಗೆ ನುಗ್ಗಿ ಹಳ್ಳದ ಆಕಾರದಲ್ಲಿ ನಿಂತುಕೊಂಡ ಪ್ರಯುಕ್ತ ಬೆಳಗಾದರೆ ಸಾರ್ವಜನಿಕರು ಚರಂಡಿ ನೀರಲ್ಲಿ ದಾಟಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಎಸ್‌ಎಫ್‌ಸಿ ಅನುದಾನದಲ್ಲಿ ಪುರಸಭೆಯ ವಾಪ್ತಿಯ ವಾರ್ಡ್‌ಗಳಲ್ಲಿನ ರಸ್ತೆ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಅನುದಾನದ ಅಡಿಯಲ್ಲಿ ಸುಮಾರು ಐದು ಕೋಟಿ ರೂಪಾಯಿ ಮಂಜೂರಾದರೂ ವಾರ್ಡ್‌ಗಳ ಅಭಿವೃದ್ಧಿ ಮಾತ್ರ ಮರೀಚಿಕೆ ಎಂಬ ಆರೋಪ ಕೇಳಿ ಬಂದಿದೆ.

ಇದೇ ರಸ್ತೆಯಲ್ಲಿ ಪ್ರಸಿದ್ಧ ಅಂಜನಯ್ಯ ದೇವಸ್ಥಾನ ಇದೆ.

 

ಪಟ್ಟಣದ ವಿವಿಧ ವಾರ್ಡ್‌ಗಳ ನಾಗರಿಕರು ಸದರಿ ದೇವಸ್ಥಾನಕ್ಕೆ ಬರುವುದು ಸಂಪ್ರದಾಯವಿದೆ. ದೇವಸ್ಥಾನ ಮುಂದೆ ಚರಂಡಿ ನೀರು ನಿಲ್ಲುವುದರಿಂದ ದೇವಸ್ಥಾನ ಪೂಜೆಗೆ ಬರುವವರಿಗೆ ದೊಡ್ಡ ಸಮಸ್ಯೆ ರದುರಾಗಿದೆ. ಈಗಾಗಲೇ ಪುರಸಭೆಗೆ ಮನವಿ ಸಲ್ಲಿಸಿದರೂ ಇದುವರಿಗೂ ಯಾರೊಬ್ಬರೂ ಅಧಿಕಾರಿಗಳು ಗಮನ ಹರಿಸಿ ರಸ್ತೆಯ ಮೇಲೆ ನಿಲ್ಲುವ ಚರಂಡಿ ನೀರನ್ನು ಬೇರಡೆಗೆ ಕಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.