ಸೋಮವಾರ, ಮೇ 23, 2022
30 °C

ಕೋಟಿ ತೀರ್ಥ ಕಲುಷಿತಗೊಳಿಸದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣದ ಕಾಶಿಯೆಂದೇ ಖ್ಯಾತಿ ಪಡೆದ ಶ್ರಿ ಕ್ಷೇತ್ರ ಗೋಕರ್ಣಕ್ಕೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿ ಪೌರಾಣಿಕ ಇತಿಹಾಸವುಳ್ಳ ಕೋಟಿ ತೀರ್ಥವೆಂಬ ಬೃಹತ್ ಕೆರೆಯಿದೆ.ಅಲ್ಲಿಗೆ ಬರುವ ಭಕ್ತರು ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆಯುವುದು ವಾಡಿಕೆ. ಅದರಂತೆ ನಾನೂ ಸ್ನಾನ ಮಾಡಲು ಕೆರೆಗೆ ಇಳಿದೆ. ನೀರು ಪಾಚಿಗಟ್ಟಿತ್ತು. ಒಂದು ಬದಿಯಲ್ಲಿ ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು.ಇನ್ನೊಂದು ಬದಿಯಲ್ಲಿ ಕೆಲವರು ಚೆನ್ನಾಗಿ ಸೋಪು ಹಾಕಿ ಮನೆಯಲ್ಲಿ ಸ್ನಾನ ಮಾಡುವಂತೆ ಮೈಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ನೀರಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳು ತೇಲುತ್ತಿದ್ದವು.ಮೆಟ್ಟಿಲಿನಲ್ಲಿ ಸೀರೆಯೊಂದು ಅನಾಥವಾಗಿ ಬಿದ್ದಿತ್ತು. ಕೋಟಿ ತೀರ್ಥದ ಕೊಳಕನ್ನು ನೋಡಿ ನನಗೆ ಸ್ನಾನ ಮಾಡುವುದು ಬಿಡಿ, ಆ ನೀರನ್ನು ಕೈಯಿಂದ ಮುಟ್ಟುವುದಕ್ಕೂ ಹೇಸಿಗೆ ಆಯಿತು.ದೇವಸ್ಥಾನದ ಆಡಳಿತ ಮಂಡಳಿಯವರು ಕೂಡಲೇ ಕಾರ್ಯಪ್ರವೃತ್ತರಾಗಿ ಕೆರೆಯಲ್ಲಿ ಬಟ್ಟೆ ಒಗೆಯುವುದು, ಸೋಪು ಹಾಕಿ ಸ್ನಾನ ಮಾಡುವುದು ಇತ್ಯಾದಿಗಳಿಂದ ನೀರನ್ನು ಮಲಿನಗೊಳಿಸುವುದನ್ನು ನಿಷೇಧಿಸಬೇಕಾಗಿ ವಿನಂತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.