ಸೋಮವಾರ, ಡಿಸೆಂಬರ್ 16, 2019
17 °C

ಕೋಟಿ ದೊರೆ ಜಯಚಂದ್ರಗೆ ಸಾಲವೂ ಬೆನ್ನಿಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಟಿ.ಬಿ.ಜಯಚಂದ್ರ ಹಾಗೂ ಪತ್ನಿ ನಿರ್ಮಲಾ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ.ಜಯಚಂದ್ರ ಬಳಿ ರೂ. 78,346.55 ನಗದು. ಅಪೆಕ್ಸ್ ಬ್ಯಾಂಕ್ ಶಾಖೆಯಲ್ಲಿ 1,49,930, ಐಡಿಬಿಐ ಬ್ಯಾಂಕ್‌ನಲ್ಲಿ ರೂ. 8,81,889 ಮೊತ್ತವಿದೆ. 100 ಗ್ರಾಂ ಚಿನ್ನ ಇದೆ. ಶಿರಾ ಡಿಸಿಸಿ ಬ್ಯಾಂಕ್‌ನಲ್ಲಿ ಹಣ ಇಲ್ಲದ ಖಾತೆ ಇದೆ.ಜಯಚಂದ್ರ ಪತ್ನಿ ಜಿ.ಎಚ್.ನಿರ್ಮಲಾ ಬಳಿ ರೂ. 107749 ನಗದು ಇದೆ. ಗಂಗನಹಳ್ಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ರೂ. 3,024, ಪ್ಯಾಲೇಸ್ ಅರ್ಚೇಡ್‌ನ ವಿಜಯ ಬ್ಯಾಂಕ್‌ನಲ್ಲಿ ರೂ. 49,640, ವಿಜಯ ಬ್ಯಾಂಕ್ ಮತ್ತೊಂದು ಶಾಖೆಯಲ್ಲಿ ರೂ. 1,758 ಇದೆ. ಕಾಲು ಕೆ.ಜಿ ಚಿನ್ನ ಹಾಗೂ ಒಂದೂವರೆ ಕೆ.ಜಿ ಬೆಳ್ಳಿ ಇದೆ.ಟಿ.ಬಿ.ಜಯಚಂದ್ರ ವಿವಿಧ ಉಳಿತಾಯ ಪತ್ರ, ಹೂಡಿಕೆಯಲ್ಲಿ ರೂ. 4,86,395 ತೊಡಗಿಸಿದ್ದಾರೆ. ರೂ. 8 ಲಕ್ಷದ ಒಂದು ಕಾರು ಇದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ 1980ರಲ್ಲಿ ಹೌಸಿಂಗ್ ಸೊಸೈಟಿಯಿಂದ 60 ಸಾವಿರ ಬೆಲೆಗೆ ಮಂಜೂರು ಮಾಡಿಸಿಕೊಂಡ ವಾಣಿಜ್ಯ ಕಟ್ಟಡವಿದ್ದು, ಸದ್ಯದ ಅದರ ಮಾರುಕಟ್ಟೆ ಬೆಲೆ 4 ಕೋಟಿ ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ರೂ. 3 ಕೋಟಿ ಬೆಲೆಯ ಮನೆ ಇದೆ.ಪತ್ನಿ ನಿರ್ಮಲಾ ಹೆಸರಿನಲ್ಲಿ ಕಳ್ಳಂಬೆಳ್ಳದಲ್ಲಿ 3.22 ಎಕರೆ ಜಮೀನು ಇದ್ದು 10 ಲಕ್ಷ ಮೌಲ್ಯ ನಮೂದಿಸಲಾಗಿದೆ. ಕಳ್ಳಂಬೆಳ್ಳದ ಬಳಿ ಕೃಷಿಯೇತರ ಜಮೀನು ಇದ್ದು, ರೂ. 35 ಲಕ್ಷ ಮೌಲ್ಯ ಹೊಂದಿದೆ. ಬೆಂಗಳೂರು ಪೀಣ್ಯದಲ್ಲಿ ಸದ್ಯದ ಮಾರುಕಟ್ಟೆ ಬೆಲೆಯ ರೂ. 4.85 ಕೋಟಿ ಮೊತ್ತದ ಆಸ್ತಿ ಇದೆ.ಟಿ.ಬಿ. ಜಯಚಂದ್ರ ಬ್ಯಾಂಕ್, ಖಾಸಗಿ ವ್ಯಕ್ತಿಗಳು, ಕಂಪೆನಿ ಹಾಗೂ ತಮ್ಮ ಪುತ್ರರಾದ ಸಂತೋಷ್, ಸಂಜಯ್, ಪತ್ನಿ ನಿರ್ಮಲಾ ಜತೆ ಸೇರಿ ರೂ. 2.55 ಕೋಟಿ ಸಾಲದ ವ್ಯವಹಾರ ಮಾಡಿದ್ದಾರೆ. ಪತ್ನಿ ನಿರ್ಮಲಾ ಸಾಲದ ವ್ಯವಹಾರ ಮೊತ್ತ 22.31 ಲಕ್ಷ ಆಗಿದೆ.

ಪ್ರತಿಕ್ರಿಯಿಸಿ (+)