ಕೋಟಿ ರೂಪಾಯಿ ವಶ: ರಾಷ್ಟ್ರಪತಿ ಪುತ್ರನಿಗೆ ನೋಟಿಸ್

7

ಕೋಟಿ ರೂಪಾಯಿ ವಶ: ರಾಷ್ಟ್ರಪತಿ ಪುತ್ರನಿಗೆ ನೋಟಿಸ್

Published:
Updated:

ಅಮರಾವತಿ (ಪಿಟಿಐ): ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಅಮರಾವತಿಯ ಕಾಂಗ್ರೆಸ್ ಶಾಸಕ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ ಪುತ್ರ ರಾವ್‌ಸಾಹೇಬ್ ಶೆಖಾವತ್‌ರಿಂದ ಭಾನುವಾರ ವಶಪಡಿಸಿಕೊಳ್ಳಲಾದ ಒಂದು ಕೊಟಿ ರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.ಲೆಕ್ಕಕ್ಕೆ ಸಿಗದ ಈ ಹಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾವ್‌ಸಾಹೇಬ್, ಮಹಾರಾಷ್ಟ್ರದ ರಾಜ್ಯ ಸಚಿವ ರಾಜೇಂದ್ರ ಮುಲಕ್ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.ನಾಗಪುರದಿಂದ ಕಾರಿನಲ್ಲಿ ಅಮರಾವತಿಗೆ ಸಾಗಿಸುತ್ತ್ದ್ದಿದಾಗ ಈ ಹಣವಶಪಡಿಸಿಕೊಳ್ಳಲಾಗಿತ್ತು. `ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ 87 ಬಡ ಅಭ್ಯರ್ಥಿಗಳಿಗೆ ನೀಡಲು ರಾಜ್ಯ ಕಾಂಗ್ರೆಸ್ ಸಮಿತಿ ಈ ಹಣ ನೀಡಿತ್ತು~ ಎಂದು ರಾವ್‌ಸಾಹೇಬ್ ತಿಳಿಸಿದ್ದಾರೆ.    

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry