ಕೋಟಿ ರೂಪಾಯಿ ವಶ: ಸಂವಹನ ಲೋಪ ಕಾರಣ

7

ಕೋಟಿ ರೂಪಾಯಿ ವಶ: ಸಂವಹನ ಲೋಪ ಕಾರಣ

Published:
Updated:

ಅಮರಾವತಿ (ಪಿಟಿಐ):  ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೊದಲು, ಫೆ 12ರಂದು ಪೊಲೀಸರು 1ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿರುವುದಕ್ಕೆ ತಮ್ಮ ಹಾಗೂ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ನಡುವಿನ `ಸಂವಹನ ಅಂತರ~ ಕಾರಣ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ಕಾಂಗ್ರೆಸ್ ಶಾಸಕ ರಾವ್‌ಸಾಹೇಬ್ ಶೆಖಾವತ್ ಮಂಗಳವಾರ ಹೇಳಿದ್ದಾರೆ.

`ಈ ಘಟನೆಗೆ ಸಂವಹನದಲ್ಲಾದ ಲೋಪವೇ ಕಾರಣ. ಹಣವನ್ನು ಹೇಗೆ ಮತ್ತು ಯಾವಾಗ ರವಾನಿಸಲಾಗುತ್ತದೆ ಎಂಬ ಬಗ್ಗೆ ಎಂಪಿಸಿಸಿ ನನಗೆ ಮಾಹಿತಿ ನೀಡಿರಲಿಲ್ಲ. ಅಮರಾವತಿ ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಹಣವನ್ನು ಜಪ್ತಿ ಮಾಡಿದ ಬಳಿಕವಷ್ಟೇ ಈ ಬಗ್ಗೆ ತಿಳಿಯಿತು~ ಎಂದು ಶೆಖಾವತ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry