ಕೋಟಿ ಸದಸ್ಯತ್ವ ನೋಂದಣಿ ಗುರಿ

7
ಮೈ ಭೀ ಆಮ್‌ ಆದ್ಮಿ– ಎಎಪಿ ಅಭಿಯಾನ

ಕೋಟಿ ಸದಸ್ಯತ್ವ ನೋಂದಣಿ ಗುರಿ

Published:
Updated:
ಕೋಟಿ ಸದಸ್ಯತ್ವ ನೋಂದಣಿ ಗುರಿ

ನವದೆಹಲಿ (ಪಿಟಿಐ): ದೆಹಲಿ ವಿಧಾನ­ಸಭೆ ಚುನಾ­ವಣೆಯ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತ­ವಾಗಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದೆ.ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ ಜನವರಿ 26ಕ್ಕೆ ಮೊದಲು ದೇಶ­ದಾದ್ಯಂತ ಒಂದು ಕೋಟಿ ಸದಸ್ಯರನ್ನು ನೋಂದಣಿ ಮಾಡಿಕೊಳ್ಳುವ ಗುರಿ­ಯನ್ನು ಎಎಪಿ ಹೊಂದಿದೆ.‘ಮೈ ಭೀ ಆಮ್‌ ಆದ್ಮಿ’ ಅಭಿ­ಯಾನದ ಭಾಗವಾಗಿ ದೇಶದ ಯಾವುದೇ ವ್ಯಕ್ತಿ ಸದಸ್ಯತ್ವಕ್ಕಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಶುಲ್ಕ ಪಾವತಿ­ಸುವ ಅಗತ್ಯ ಇಲ್ಲ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.ಭಾರತದ ಯಾವುದೇ ಪ್ರಜೆ 07798220033 ಸಂಖ್ಯೆಗೆ ಕರೆ ಮಾಡುವ ಮೂಲಕ (ಮಿಸ್ ಕಾಲ್‌) ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿ­ಕೊಳ್ಳಬಹುದು. ಹಾಗೆಯೇ ಈ ಸಂಖ್ಯೆಗೆ ಹೆಸರು, ಎಸ್‌ಟಿಡಿ ಕೋಡ್,  ವಿಧಾನ ಸಭಾ ಕ್ಷೇತ್ರದ ಹೆಸರನ್ನು  ಎಸ್‌ಎಂಎಸ್‌ ಮಾಡುವ ಮೂಲಕವೂ ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಪಕ್ಷದ ಜಾಲ­ತಾಣ­ದಲ್ಲಿಯೂ ನೋಂದಣಿಗೆ ಅವಕಾಶ ಇದೆ ಎಂದರು.ಭಾರಿ ಸ್ಪಂದನೆ: ಆಂದೋಲನ ಆರಂಭಿಸಿ ಮೊದಲ ಮೂರು ತಾಸುಗಳಲ್ಲಿಯೇ 47,500 ಜನರು ಜಾಲತಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಎಎಪಿ  ಹೇಳಿದೆ.ಹಲ್ಲೆ: ದಕ್ಷಿಣ ದೆಹಲಿಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿದ್ದ ಎಎಪಿಯ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ತಂಡದಲ್ಲಿ ಹತ್ತು ಜನರಿದ್ದರು ಎನ್ನಲಾಗಿದೆ.ಕೇಜ್ರಿವಾಲ್‌ ಅವರಿಗೆ ಭದ್ರತೆ

ನವದೆಹಲಿ (ಪಿಟಿಐ): ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಅರಿವಿಗೆ ಬಾರ­ದಂತೆಯೇ ಅವರಿಗೆ ಭದ್ರತೆ ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಹೇಳಿದ್ದಾರೆ.ಕೇಜ್ರಿವಾಲ್‌ ಅವರು ಮತ್ತೆಮತ್ತೆ ಭದ್ರತೆಯನ್ನು ತಿರಸ್ಕರಿಸಿದರೂ ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ಸುರಕ್ಷತೆ ಅಗತ್ಯಗಳಿಗೆ ಅನುಗುಣವಾಗಿ ಹಾಗೂ ಅವರು ಎದುರಿಸುತ್ತಿರುವ ಅಪಾಯದ  ಆಧಾರ­ದಲ್ಲಿ ಭದ್ರತೆ ಒದಗಿಸುವುದು ಸರ್ಕಾರ ಮತ್ತು ಗೃಹ ಸಚಿವಾಲಯದ ಕರ್ತವ್ಯ ಎಂದು ಶಿಂಧೆ ತಿಳಿಸಿದ್ದಾರೆ.

ಕೇಜ್ರಿವಾಲ್‌ ಮುಖ್ಯಮಂತ್ರಿಯಾಗಿ ಆಯ್ಕೆ­ಯಾದ ಕೂಡಲೇ ಅವರಿಗೆ ಭದ್ರತೆ ಒದಗಿಸಲಾಗಿದೆ. ಅವರ ಅರಿವಿಗೆ ಬಾರದಂತೆಯೇ ಭದ್ರತೆ ಒದಗಿಸಲಾಗಿದೆ ಎಂದು ಶಿಂಧೆ ಹೇಳಿದ್ದಾರೆ.ದೆಹಲಿ ಪೊಲೀಸರು ಭದ್ರತೆಯ ಉಸ್ತುವಾರಿ ನೋಡಿ­ಕೊಳ್ಳುತ್ತಿದ್ದಾರೆ. ಕೇಜ್ರಿವಾಲ್‌ ಸಮೀಪದ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೂ ದೆಹಲಿ ಆಯುಕ್ತರು ಚರ್ಚೆ ನಡೆಸಿದ್ದಾರೆ. ಎಎಪಿಯ ಕಚೇರಿಯೂ ಅಲ್ಲಿ ಇರುವುದರಿಂದ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry