ಕೋಟೆಕೆರೆ ದಂಡೆಯಲ್ಲಿ ಶಾಸಕರ ವಿಹಾರ

7

ಕೋಟೆಕೆರೆ ದಂಡೆಯಲ್ಲಿ ಶಾಸಕರ ವಿಹಾರ

Published:
Updated:

ಬೆಳಗಾವಿ: ನಗರದಲ್ಲಿ ನಡೆದಿರುವ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕರಲ್ಲಿ ಸಚಿವರೂ ಸೇರಿದಂತೆ ಕೆಲವರು ಗುರುವಾರ ಬೆಳಿಗ್ಗೆ ಕೋಟೆಕೆರೆ ದಂಡೆ ಮೇಲೆ ವಾಯುವಿಹಾರ ನಡೆಸಿದರು. ಹಲವರು ಹೋಟೆಲ್ ಕೋಣೆಯಲ್ಲೇ ಯೋಗಾಭ್ಯಾಸ ಮಾಡಿದರು.ಸಚಿವರಾದ ರಾಜುಗೌಡ ಮತ್ತು ಶಿವನಗೌಡ ನಾಯಕ ಕೋಟೆಕೆರೆ ದಂಡೆಯಲ್ಲಿ ದೈಹಿಕ ಕಸರತ್ತನ್ನೂ ನಡೆಸಿದರು. ಶಾಸಕರಾದ ಸಂಗಣ್ಣ ಕರಡಿ, ಯು.ಟಿ. ಖಾದರ್ ವಾಕಿಂಗ್ ಮಾಡಿದರು. ಸಚಿವ ವಿ.ಸೋಮಣ್ಣ ತಮ್ಮ ಕೋಣೆಯಲ್ಲೇ ಯೋಗಾಭ್ಯಾಸ ಮಾಡಿದರು. ಮತ್ತೊಬ್ಬ ಸಚಿವ ಮುರುಗೇಶ್ ನಿರಾಣಿ ಪ್ರಾಣಾಯಾಮ ಮಾಡಿದರು. ಕೋಟೆಕೆರೆ ವಾತಾವರಣ ಸಚಿವರು ಮತ್ತು ಶಾಸಕರನ್ನಲ್ಲದೆ ಬೆಂಗಳೂರಿನಿಂದ ಬಂದ ಅಧಿಕಾರಿಗಳ ಮನಸ್ಸನ್ನೂ ಸೆರೆ ಹಿಡಿಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry