ಭಾನುವಾರ, ಮೇ 16, 2021
22 °C

ಕೋಟೆ ಅತಿಕ್ರಮಣ ತೆರವಿಗೆ ಅ. 15ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: `ಕಿತ್ತೂರು ರಾಣಿ ಚನ್ನಮ್ಮನ ಕೋಟೆ ಸುತ್ತಲೂ ನಡೆದಿರುವ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡ ತೆರವು, ರಾಜವಂಶಸ್ಥರಿಗೆ ಗೌರವಪೂರ್ವಕ ಪರಿಹಾರ ಮತ್ತು ಸಂಗೊಳ್ಳಿ-ಅಮಟೂರು ಉತ್ಸವ ಆಚರಣೆ ಮಾಡುವ ಲಿಖಿತ ಭರವಸೆಯನ್ನು ಸರಕಾರ ನೀಡದಿದ್ದರೆ ಅಕ್ಟೋಬರ್ 15ರಂದು ಧರಣಿ ಕೈಗೊಳ್ಳಲಾಗುವುದು~ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ತಿಳಿಸಿದರು.ಭಾನುವಾರ ಸಂಜೆ ಸಂಗೊಳ್ಳಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, `ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಲ್ಲಿಯವರೆಗೆ ಕಿತ್ತೂರಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಲೆಕ್ಕ ಹೇಳಿ~ ಎಂದು ಕೇಳಿದರು.`ರಾಷ್ಟ್ರೀಯ ಹೋರಾಟಗಾರ್ತಿ ಚನ್ನಮ್ಮನ ಊರು ಕಿತ್ತೂರು. ಅದು ಯಾರ ಆಸ್ತಿಯೂ ಅಲ್ಲ. ನನ್ನ ಅಲ್ಲಿಯ ಪ್ರವೇಶವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ~ ಎಂದರು.`ಇದು ಶಾಸಕರ ವಿರುದ್ಧದ ಹೋರಾಟವಲ್ಲ~ ಎಂದು ಪುನರುಚ್ಚರಿಸಿದ ಅವರು, `ಮುಂದಿನ ಜನಾಂಗಕ್ಕೆ ರಾಣಿಯ ಪ್ರೇರಣೆ ಉಳಿಯುವ ಉದ್ದೇಶದಿಂದ ಈ ಹೋರಾಟ ಕೈಗೆತ್ತಿಕೊಳ್ಳಲಾಗಿದೆ~ ಎಂದು ಹೇಳಿದರು.

`ಪಾರ್ಕು, ರಸ್ತೆ, ಬೀದಿಗೆ ಜೀವಂತ ಇರುವ ರಾಜಕಾರಣಿಗಳ ಹೆಸರು ಇಡುತ್ತಾರೆ. ಇಂತಹ ವೀರರ ನೆನಪಾಗುವುದಿಲ್ಲವೇ~ ಎಂದ ಮುತಾಲಿಕ ಅವರು, `ವೀರರ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು~ ಎಂದು ಒತ್ತಾಯಿಸಿದರು.ಶಾಸಕರಿಂದಲೂ ಅತಿಕ್ರಮಣ: `ಬೈಲಹೊಂಗಲ ಪಟ್ಟಣದಲ್ಲಿ ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಮಾಡಲು ಈ ಮೊದಲು ಉದ್ದೇಶಿಸಿದ್ದ ಪುರಸಭೆಯ ಜಾಗೆಯನ್ನು ಬೈಲಹೊಂಗಲ ಶಾಸಕರು ಅತಿಕ್ರಮಣ ಮಾಡಿದ್ದಾರೆ~ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಮಾಡಲಗಿ ಆರೋಪಿಸಿದರು.`ಕಿತ್ತೂರು ಪಟ್ಟಣದಲ್ಲಿ ಪ್ರಾಧಿಕಾರದ ವತಿಯಿಂದ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಹೇಳುತ್ತಾರೆ. ಎಲ್ಲಿ ಮಾಡಿದ್ದಾರೆ ಎಂಬುದನ್ನು ಇವರು ತೋರಿಸಿಕೊಡಬೇಕು~ ಎಂದು ಮಾಡಲಗಿ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.