ಶುಕ್ರವಾರ, ಫೆಬ್ರವರಿ 26, 2021
30 °C

ಕೋಟ್ಯಂತರ ಹಣ ವೆಚ್ಚ: ಕುಡಿಯಲು ನೀರಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ್ಯಂತರ ಹಣ ವೆಚ್ಚ: ಕುಡಿಯಲು ನೀರಿಲ್ಲ!

ಮುಂಡಗೋಡ: ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಮುಗಿಸಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದೇ ಜನರು ಪರದಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯದಿಂದ ಪಾಳಾ ಹಾಗೂ ಇತರೆ ಹನ್ನೊಂದು ಗ್ರಾಮ ಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಸಲುವಾಗಿ ₨ 4.97 ಕೋಟಿ ವೆಚ್ಚದಲ್ಲಿ 2011–12ನೇ ಸಾಲಿನಲ್ಲಿ ಕಾಮಗಾರಿ ಕೈಗೊಂಡು ಕಳೆದ ವರ್ಷ ಉದ್ಘಾಟಿಸಲಾಗಿತ್ತು.ಪ್ರಸ್ತುತ ಯೋಜನೆಯಿಂದ ತಾಲ್ಲೂಕಿನ ಪಾಳಾ, ಮಳಗಿ, ಸಿದ್ದಾಪುರ, ವೀರಾಪುರ, ಹರಗನಹಳ್ಳಿ, ಕೊಳಗಿ, ಗೊಟಗೋಡಿಕೊಪ್ಪ, ಭದ್ರಾಪುರ, ಕೋಡಂಬಿ, ರಾಮಾಪುರ, ಜೋಡಿಕಟ್ಟಾ ಗ್ರಾಮಗಳು ಶಾಶ್ವತವಾಗಿ ಕುಡಿಯುವ ನೀರು ಸೌಲಭ್ಯವನ್ನು ಹೊಂದಿವೆ. ಆದರೆ ಮಳಗಿ, ಸಿದ್ದಾಪುರ, ಕೋಡಂಬಿ, ಕೊಳಗಿ ಗ್ರಾಮದವರು ಸೇರಿದಂತೆ ಇನ್ನಿತರ ಗ್ರಾಮಸ್ಥರು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಇತ್ತೀಚೆಗೆ ಶಾಸಕ ಶಿವರಾಮ ಹೆಬ್ಬಾರ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆ ಯಾಗುತ್ತಿದೆ ಎಂದು ಆರೋಪಿಸಿದ್ದರು.ಶಾಶ್ವತ ಕುಡಿಯುವ ನೀರು ಯೋಜನೆಯ ಸೌಲಭ್ಯ ಹೊಂದಿರುವ ಗ್ರಾಮಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಲು ಯೋಜನೆಯ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ ಎನ್ನಲಾಗಿದೆ.ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಂಡರೂ ಆ ಭಾಗದ ಜನರಿಗೆ ಉಪಯೋಗವಾಗು ತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದ ಶಾಸಕರು ಕೂಡಲೇ ಯೋಜನೆಯ ನಿರ್ವಹಣೆ ಹೊಂದಿರುವ ಗುತ್ತಿಗೆ ದಾರರ ಸಭೆ ನಡೆಸಿ ಸಮರ್ಪಕ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳ ಬೇಕು ಎಂದು ತಹಶೀಲ್ದಾರ್‌ರಿಗೆ ಸೂಚಿಸಿದ್ದರು.ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳನ್ನು ಆಯ್ಕೆ ಮಾಡಿರುವ ಟಾಸ್ಕ್‌ಫೋರ್ಸ್‌ ಕಮಿಟಿಯು ಅನುದಾನಕ್ಕಾಗಿ ಪ್ರಸ್ತಾವ ವನ್ನು ಈಗಾಗಲೇ ಕಳಿಸಿದೆ ಎನ್ನಲಾಗಿದೆ.ಮಳಗಿಯ ಇಂದಿರಾನಗರ, ಸಿದ್ಧಾಪುರ, ಹಳ್ಳಿಕೊಪ್ಪ ₨ 7.50 ಲಕ್ಷ, ಗೊಟಗೋಡಿಕೊಪ್ಪ ಪ್ಲಾಟ್‌ ₨ 4.50 ಲಕ್ಷ, ಹರಗನಹಳ್ಳಿ ಬಸವಪಟ್ಟಣ ₨ 4.50 ಲಕ್ಷ, ಕ್ಯಾದಗಿಕೊಪ್ಪ ₨ 1.50 ಲಕ್ಷ, ಹೊಸಕೊಪ್ಪ ಕಾಳೆಬೈಲ್‌ ₨ 1.50 ಲಕ್ಷ, ಜೋಡಿಕಟ್ಟಾ ₨ 23 ಲಕ್ಷ, ಭದ್ರಾಪುರ ಹೊಸನಗರ ₨ 12 ಲಕ್ಷ, ರಾಮಾಪುರ ಪ್ಲಾಟ್‌ ₨ 4 ಲಕ್ಷ, ಕೊಳಗಿ ₨ 7.50 ಲಕ್ಷ ಮತ್ತು ಕೋಡಂಬಿ ಹಳ್ಳದಮನೆ 16 ಲಕ್ಷ ರೂಪಾಯಿಗಳ ಪ್ರಸ್ತಾವವನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಯೋಜನೆಯಡಿ ಬಹುತೇಕ ಗ್ರಾಮಗಳು ಶಾಶ್ವತ ಕುಡಿಯುವ ನೀರು ಯೋಜನೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾಗಿವೆ. ಏಪ್ರಿಲ್‌ ತಿಂಗಳ ಅಂತ್ಯದಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.