ಭಾನುವಾರ, ಜೂನ್ 13, 2021
25 °C
ಅಭ್ಯರ್ಥಿ ಬಳಿ 1ಕೆ.ಜಿ, ಪತ್ನಿ ಬಳಿ 2.5 ಕೆ.ಜಿ ಚಿನ್ನ

ಕೋಟ್ಯಧೀಶ ಕೇಶವ ವಿರುದ್ಧ ಏಳು ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೋಟಿಗಟ್ಟಲೆ ಮೌಲ್ಯದ ಕೃಷಿ, ಕೃಷಿಯೇತರ ಜಮೀನು ಹೊಂದಿರುವ  ಕೋಲಾರ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಕೇಶವ ಅವರ ವಿರುದ್ಧ ಮೂರು ವಂಚನೆ ಪ್ರಕರಣ ಸೇರಿದಂತೆ ಏಳು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿವೆ.ಕೋಟಿಗಟ್ಟಲೆ ಮೌಲ್ಯದ ಆಸ್ತಿಗಳ ಮಾಲೀಕರಾದ ಅವರು ₨ 7,55 ಕೋಟಿಯಷ್ಟು ಸಾಲ ಮಾಡಿದ್ದಾರೆ. ಕೇಶವ ಅವರ ಬಳಿ 23,50 ಲಕ್ಷ ಮೌಲ್ಯದ 1 ಕೆಜಿಯಷ್ಟು ಚಿನ್ನವಿದ್ದರೆ, ಅವರ ಪತ್ನಿ ಹೇಮಲತಾ ಬಳಿ ₨ 68,75 ಲಕ್ಷ ಮೌಲ್ಯದ ಚಿನ್ನವಿದೆ !  ಅಭ್ಯರ್ಥಿ ಬಳಿ ಎರಡು ಟ್ರ್ಯಾಕ್ಟರ್‌ ಬಿಟ್ಟರೆ ಬೇರೆ ವಾಹನಗಳೇ ಇಲ್ಲ.ಪ್ರಕರಣಗಳು: ಏಳು ಪ್ರಕರಣಗಳ ಪೈಕಿ ಎರಡು ಪ್ರಕರಣಗಳಲ್ಲಿ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮತ್ತೊಂದು ಪ್ರಕರಣದಲ್ಲಿ 15ನೇ ಬೆಂಗಳೂರಿನ ಎಸಿಎಂಎಂ್ ನ್ಯಾಯಾಲಯವು ದಂಡ ಶುಲ್ಕವನ್ನು ವಿಧಿಸಿದೆ. ಅದಕ್ಕೆ ಸೆಷೆನ್ಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದು ಆದೇಶಕ್ಕೆ ತಡೆಯಾಜ್ಞೆ ದೊರೆತಿದೆ ಎಂದು ಕೇಶವ ತಾವು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.₨ 2 ಲಕ್ಷ ವಂಚಿಸಿದ್ದಾರೆ ಎಂದು ದೂರಿ ಎಂ.ನಾರಾ­ಯಣ­ಸ್ವಾಮಿ, ₨ 3 ಲಕ್ಷ ವಂಚಿಸಿದ್ದಾರೆ ಎಂದು ದೂರಿ ದಿನೇಶ್‌ ಜೈನ್‌ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ, ದೂರು ದಾಖಲಿಸಿದ್ದಾರೆ. ಡಾ.ಶಂಕರ್‌ ನಾಯಕ್‌ ಎಂಬುವವರು 12 ನೇ ಎಸಿ­ಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಮಕೃಷ್ಣಪ್ಪ ಎಂಬುವವರು ದೇವನಹಳ್ಳಿಯ ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದಲ್ಲಿ, ಆಸ್ತಿ ವಿವಾದ ಸಂಬಂಧ ವೀರೇಂದ್ರಬಾಬು ಎಂಬುವವರು ದೇವನ­ಹಳ್ಳಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ, ವಿ.ಶ್ರೀನಿವಾಸ್‌ ಎಂಬುವವರು ದೂರು ದಾಖಲಿಸಿರುವ ದೂರಿನ ಹಿನ್ನೆಲೆಯಲ್ಲಿ ಆರೋಪ ನಿಗದಿಯಾಗಿದೆ ಎಂದು ಕೇಶವ ಮಾಹಿತಿ ನೀಡಿದ್ದಾರೆ. ಆದರೆ ಪ್ರಕರಣ ಮತ್ತು ನ್ಯಾಯಾಲಯದ ಮಾಹಿತಿಯನ್ನು ಉಲ್ಲೇಖಿಸಿಲ್ಲ.ಸ್ಥಿರಾಸ್ತಿ: ₨ 12,48 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 2011, 2012, 2013ರಲ್ಲಿ ದೇವನಹಳ್ಳಿಯ ದ್ಯಾವರಾಯನಹಳ್ಳಿ, ಬುಲ್ಲಹಳ್ಳಿ, ಹಾಸನಜಿಲ್ಲೆಯ ಹೂವಿನಹಳ್ಳಿ ಕಾವಲು ಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಗ್ರಾಮದಲ್ಲಿ ಅವರು ಹೊಂದಿರುವ ಕೃಷಿ ಜಮೀನು  ಪ್ರಸ್ತುತ ಮಾರುಕಟ್ಟೆ ಮೌಲ್ಯ ₨ 3,01 ಕೋಟಿ.  ದೇವನಹಳ್ಳಿಯ ತಿಂಡ್ಲು, ಆಂಧ್ರಪ್ರದೇಶದಲ್ಲಿ ಮದನಪಲ್ಲಿ ತಾಲ್ಲೂಕಿನ ಪೊನ್ನುತಪಲೇಂ ಗ್ರಾಮದಲ್ಲಿ ಅವರು ಹೊಂದಿರುವ ಕೃಷಿಯೇತರ ಜಮೀನಿನ ಪ್ರಸ್ತುತ ಮಾರುಕಟೆ್ಟ ಮೌಲ್ಯ ₨ 1,52 ಕೋಟಿ.

ಬೆಂಗಳೂರು ಪೂರ್ವ ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ಮೂರಂತಸ್ತಿನ ಕಟ್ಟಡದ ಬೆಲೆ  ₨ 75 ಲಕ್ಷ, ಅರಮನೆ ನಗರದ ಆರ್‌ಎಂವಿ 2ನೇ ಹಂತದಲ್ಲಿ ಹೊಂದಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೌಲ್ಯ ₨ 7 ಕೋಟಿ.ಚರಾಸ್ತಿ: ₨ 2,84 ಕೋಟಿ ಚರಾಸ್ತಿಯನ್ನು ಹೊಂದಿದ್ದಾರೆ. ಅವರ ಬಳಿ ₨ 39,50 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಅವರು, ₨ 3,03 ಲಕ್ಷ ಹೊಂದಿದ್ದಾರೆ, ವಿವಿಧ ಸಂಸ್ಥೆಗಳಲ್ಲಿ ₨ 1,76 ಲಕ್ಷವನ್ನು ಹೂಡಿದ್ದಾರೆ.  ₨ 31,48 ಲಕ್ಷ ವೈಯಕ್ತಿಕ ಸಾಲವನ್ನು ನೀಡಿದ್ದಾರೆ.ಅವರ ಬಳಿ ₨ 7,22 ಲಕ್ಷ ನಗದು ಇದೆ.ಕೇಶವ ಪತ್ನಿ ಹೇಮಲತಾ ₨ 1,06 ಕೋಟಿಯಷ್ಟು ಚರಾಸ್ತಿಯನ್ನು ಹೊಂದಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ 25,75 ಲಕ್ಷವನ್ನು ಹೂಡಿದ್ದಾರೆ. ಬೆಂಗಳೂರಿನ ಮತ್ತೀಕೆರೆ ಬಡಾವಣೆಯಲ್ಲಿ  ₨ 43,30 ಲಕ್ಷ ಮೌಲ್ಯದ ಕಟ್ಟಡವನ್ನು ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.