ಶನಿವಾರ, ಜೂನ್ 19, 2021
23 °C

ಕೋಟ್ಯಾಧಿಪತಿಯಲ್ಲಿ: ಪುನೀತ್ ಹುಟ್ಟುಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 17 ಪುನೀತ್ ಹುಟ್ಟುಹಬ್ಬ. ಆದರೆ, ಹುಟ್ಟುಹಬ್ಬದ ದಿನ ಪುನೀತ್ ಊರಿನಲ್ಲಿರುವುದಿಲ್ಲ. `ಅಣ್ಣಾ ಬಾಂಡ್~ನ ಗೀತೆಗಳ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದ್ದು, ಆ ಚಿತ್ರೀಕರಣದಲ್ಲಿ ಪುನೀತ್ ಭಾಗವಹಿಸಿದ್ದಾರೆ.

 

ವಿದೇಶ ಪ್ರವಾಸದಲ್ಲಿರುವ ಅವರು ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಚಿತ್ರತಂಡದೊಂದಿಗೆ ಆಚರಿಸಿಕೊಳ್ಳುವರು. ಆದರೆ, ಅದಕ್ಕೆ ಮುನ್ನವೇ `ಕನ್ನಡದ ಕೋಟ್ಯಾಧಿಪತಿ~ ರಿಯಾಲಿಟಿ ಶೋನ ಆಕಾಂಕ್ಷಿಗಳೊಂದಿಗೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದಹಾಗೆ, ಪುನೀತ್ ಈ ಕಾರ್ಯಕ್ರಮದ ನಿರೂಪಕರು.`ಕನ್ನಡದ ಕೋಟ್ಯಾಧಿಪತಿ~ ಹಿಂದಿಯ `ಕೌನ್ ಬನೇಗಾ ಕರೋಡ್‌ಪತಿ~ ಕಾರ್ಯಕ್ರಮದ ಕನ್ನಡ ರೂಪ. ಸುವರ್ಣ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಗುರುವಾರದವರೆಗೆ ಈ ಕಾರ್ಯಕ್ರಮ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ.`ಕನ್ನಡದ ಕೋಟ್ಯಾಧಿಪತಿ~ ಕಾರ್ಯಕ್ರಮದ ಚಿತ್ರೀಕರಣದ ಸಂದರ್ಭದಲ್ಲಿಯೇ ಪುನೀತ್ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂಚಿಕೆ ಇಂದು (ಮಾರ್ಚ್ 15) ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ.ಪುನೀತ್ ರಾಜಕುಮಾರ್ ಅವರು `ಕೋಟ್ಯಾಧಿಪತಿ~ಯ ಸೆಟ್‌ನಲ್ಲಿ ಸ್ಪರ್ಧಾರ್ಥಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ನಮ್ಮ ಸೌಭಾಗ್ಯ ಎಂದು ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಸಂತಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.