ಗುರುವಾರ , ನವೆಂಬರ್ 21, 2019
20 °C

ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ

Published:
Updated:

ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುರುವ `ಕನ್ನಡದ ಕೋಟ್ಯಾಧಿಪತಿ' ಸರಣಿಯಲ್ಲಿ ಯುಗಾದಿ (ಏ.11)ಯಂದು ಸ್ಯಾಂಡಲ್‌ವುಡ್‌ನ `ಕನಸಿನ ರಾಣಿ' ಮಾಲಾಶ್ರೀ ಅವರು ಹಾಟ್ ಸೀಟ್‌ಗೆ ಬರಲಿದ್ದಾರೆ.ಕಾರ್ಯಕ್ರಮದಲ್ಲಿ ಪ್ರಶ್ನೋತ್ತರಗಳ ಜತೆಗೆ, ಮಾಲಾಶ್ರೀಗೆ ಹೆಸರು ತಂದುಕೊಟ್ಟ ಹಾಡುಗಳಲ್ಲೊಂದಾದ `ಜಟಕಾ ಕುದುರೆ ಹತ್ತಿ ಪ್ಯಾಟೆಗ್ ಹೋಗುಮಾ' ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ತಮ್ಮ ಮತ್ತು ಕುಟುಂಬದ ಬಗ್ಗೆ, ಸ್ನೇಹಿತರ ಬಗ್ಗೆ ಅನೇಕ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಅವರ ಒಡಹುಟ್ಟಿದ ತಂಗಿ ಶುಭಶ್ರಿ (ಚಿರಬಾಂಧವ್ಯ ಚಿತ್ರದ ನಾಯಕಿ) ಅಕ್ಕನ ಬಗ್ಗೆ ಮಾತನಾಡಿದ್ದಾರೆ.

 

ಪ್ರತಿಕ್ರಿಯಿಸಿ (+)