ಕೋಟ್ಲಾ ನವೀಕರಣಕ್ಕೆ ನೂರು ಕೋಟಿ ಖರ್ಚು!

7

ಕೋಟ್ಲಾ ನವೀಕರಣಕ್ಕೆ ನೂರು ಕೋಟಿ ಖರ್ಚು!

Published:
Updated:ನವದೆಹಲಿ: ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನ ಈಗ ಸುಂದರವಾಗಿ ಕಾಣುತ್ತಿದೆ. ಆದರೆ ಅದಕ್ಕಾಗಿ ನೂರು ಕೋಟಿ ರೂಪಾಯಿ ಖರ್ಚು ಮಾಡಿರುವುದು ಅನುಮಾನ ಮೂಡಿಸುತ್ತದೆ.ದಕ್ಷಿಣ ಆಫ್ರಿಕ ಮತ್ತು ವೆಸ್ಟ್‌ಇಂಡೀಸ್ ನಡುವೆ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಲೀಗ್ ಪಂದ್ಯ ಇಲ್ಲಿ ಗುರುವಾರ ನಡೆಯಲಿದೆ. ಅಪಾಯಕಾರಿ ಪಿಚ್ ಎಂಬ ಕಳಂಕ ಹೊತ್ತಿದ್ದ ಕೋಟ್ಲಾ ಮೈದಾನದ ಪಿಚ್ ಈಗ ಹಾಗಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ.2009 ರಲ್ಲಿ, ಭಾರತ-ಶ್ರೀಲಂಕಾ ನಡುವಣ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ, ಆಟ ಆರಂಭವಾದ ಸ್ವಲ್ಪ ಹೊತ್ತಿನಲ್ಲಿಯೇ ನಿಂತುಹೋಗಿತ್ತು. ಚೆಂಡು ಯದ್ವಾತದ್ವಾ ಎಗರುತ್ತಿದ್ದರಿಂದ, ಬ್ಯಾಟ್ಸಮನ್ನರಿಗೆ ಪೆಟ್ಟು ಬೀಳಬಹುದು ಎಂದು ಪಂದ್ಯವನ್ನು ರದ್ದುಪಡಿಸಲಾಗಿತ್ತು. ಕೋಟ್ಲಾ ಮೈದಾನವನ್ನು ಅಂತರರಾಷ್ಟ್ರೀಯ ಪಂದ್ಯಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.ದೇಶದ ರಾಜಧಾನಿಗೆ ಇದರಿಂದ ಅವಮಾನವಾಗಿತ್ತು. ವಿಶ್ವ ಕಪ್‌ಗಾಗಿ ಸೂಕ್ತವಾದ ಪಿಚ್ ತಯಾರಿಸುವ ಭರವಸೆ ನೀಡಿದ್ದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಒಂದು ವರ್ಷದಿಂದ ತಯಾರಿ ನಡೆಸಿತ್ತು. ಕ್ರೀಡಾಂಗಣಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ.ಮೈದಾನ ಹಚ್ಚಹಸಿರಾಗಿದೆ. ಪಿಚ್ ಕೂಡ ಬ್ಯಾಟ್ಸಮನ್ನರಿಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯ ಕೇಳಿಬಂತು. ಆದರೆ ಪ್ರೇಕ್ಷಕರ ಸೀಟುಗಳನ್ನೇನೂ ಬದಲಿಸಿಲ್ಲ. ಸೀಟಿನ ಕುಷನ್‌ಗಳು ಹರಿದುಹೋಗಿದ್ದು ಕಂಡುಬಂತು. 45 ಸಾವಿರ ಮಂದಿ ಇಲ್ಲಿ ಆಟ ನೋಡಬಹುದು.ಕೋಟ್ಲಾ ನವೀಕರಣಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ! ಕಾಮನ್‌ವೆಲ್ತ್ ಕ್ರೀಡೆಗಳಿಗಾಗಿ ನಿರ್ಮಿಸಲಾದ ಕ್ರೀಡಾಂಗಣಗಳಲ್ಲಿ ಭ್ರಷ್ಟಾಚಾರದ ವಾಸನೆ ಹಬ್ಬಿತ್ತು. ಆ ದುರ್ವಾಸನೆ ಇನ್ನೂ ಹೋಗಿಲ್ಲ. ವಿಚಾರಣೆ ನಡೆಯುತ್ತಿದೆ. ಆದರೆ ಕೋಟ್ಲಾ ಕ್ರೀಡಾಂಗಣದ ಬಗ್ಗೆ ಇನ್ನೂ ಯಾರೂ ಬೆರಳು ತೋರಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry