ಶುಕ್ರವಾರ, ನವೆಂಬರ್ 22, 2019
27 °C
ಕೊಡವ ಕುಟುಂಬಗಳ ಮಾದಂಡ ಕಪ್ ಹಾಕಿ

ಕೋಡಿಮಣಿಯಂಡ, ಪಾಲೆಕಂಡ ತಂಡಕ್ಕೆ ಗೆಲುವು

Published:
Updated:

ವಿರಾಜಪೇಟೆ: ಕೋಡಿಮಣಿಯಂಡ ಮತ್ತು ಪಾಲೆಕಂಡ ತಂಡಗಳು ಬಾಳುಗೋಡುವಿನಲ್ಲಿ ನಡೆಯುತ್ತಿರುವ ಮಾದಂಡ ಕಪ್-2013 ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಭಾನುವಾರ ಭರ್ಜರಿ ಜಯ ಸಾಧಿಸಿತು.ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು 8-0 ಗೋಲುಗಳಿಂದ ಮುಂಜಂದಿರ ತಂಡವನ್ನು ಹಣಿಯಿತು. ರಾಜಾ ಪೊನ್ನಣ್ಣ (12ನೇ ನಿಮಿಷ), ಲೋಕೇಶ್ (15ನಿ), ವಿವೇಕ್ ಉತ್ತಪ್ಪ (16ನಿ, 31), ಮೋನಿಷ್ ಅಯ್ಯಪ್ಪ (27ನಿ), ಜಯ ಗಣಪತಿ (28ನಿ), ಗಗನ್ ಮಾದಪ್ಪ (29ನಿ), ಶರತ್ ಕುಟ್ಟಪ್ಪ (35ನಿ) ಗೋಲು ಗಳಿಸಿದರು.ಪಾಲೆಕಂಡ ತಂಡವು 3-0 ಗೋಲುಗಳಿಂದ ಕೊರವಂಡ ತಂಡದ ವಿರುದ್ಧ ಜಯಿಸಿತು. ದೇವಯ್ಯ (6ನಿ), ಶಾಶ್ವತ್ (20ನಿ), ಬೋಪಣ್ಣ (39ನಿ) ಗೋಲು ಹೊಡೆದರು.

ಭಾನುವಾರದ ಇನ್ನುಳಿದ ಪಂದ್ಯಗಳಲ್ಲಿ;  ತೀತೀರ ಮತ್ತು ಅಲ್ಲಂಡ ಕುಟುಂಬಗಳ ಪಂದ್ಯಾಟದಲ್ಲಿ ತೀತೀರ ತಂಡವು 3-1ರಿಂದ ಅಲ್ಲಂಡ ತಂಡದ ವಿರುದ್ಧ ಜಯಗಳಿಸಿತು.  ನಾಣಯ್ಯ 13 ಹಾಗೂ 18ನೇ ನಿಮಿಷದಲ್ಲಿ 2 ಗೋಲು ಮತ್ತು 14ನೇ ನಿಮಿಷದಲ್ಲಿ ತರುಣ್ ಬೋಪಣ್ಣ 1 ಗೋಲು ದಾಖಲಿಸಿದರು. ಅಲ್ಲಂಡ ತಂಡದ ಪ್ರವೀಣ್ ಮಾಚಪ್ಪ 1 ಗೋಲನ್ನು ತಂಡಕ್ಕೆ ತಂದುಕೊಟ್ಟರು ಮತ್ತು ಅಮ್ಮಟಂಡ ಕುಟುಂಬಗಳ ಪಂದ್ಯಾಟದಲ್ಲಿ ಅಮ್ಮಟಂಡ ತಂಡವು 2-1ರಿಂದ  ಬಾಚಿನಾಡಂಡ ವಿರುದ್ಧ ( ಅಮ್ಮಟಂಡ ತಂಡದ ಪರವಾಗಿ ಮೇದಪ್ಪ 2 ಗೋಲು ಮತ್ತು ಬಾಚಿನಾಡಂಡ ತಂಡದ ಸಂತೋಷ್ ಪೊನ್ನಪ್ಪ 31ನೇ ನಿಮಿಷದಲ್ಲಿ ಒಂದು ಗೋಲು);  ಅಲನ್ ದೇವಯ್ಯ ದಾಖಲಿಸಿದ ಏಕೈಕ ಗೋಲಿನಿಂದ ಕನ್ನಂಡ ತಂಡವು 1-0ಯಿಂದ ಮಾಚಗಂಡ ವಿರುದ್ಧ; ಮದ್ರಿರ ಮತ್ತು ಅಪ್ಪಾರಂಡ  ಕುಟುಂಬಗಳ ಪಂದ್ಯಾಟಗಳಲ್ಲಿ ಅಪ್ಪಾರಂಡ 4-0 ಗೋಲುಗಳಿಂದ ಮದ್ರಿರಾ ವಿರುದ್ಧ; ಇದೇ ಅವಧಿಯಲ್ಲಿ ನಡೆದ ಕೊಂಡೀರ ಮತ್ತು ವಾಟೇರಿರ ಕುಟುಂಬಗಳ ಪಂದ್ಯಾಟದಲ್ಲಿ ಕೊಂಡೀರ ತಂಡವು 3-1ರಿಂದ ವಾಟೇರಿರ ವಿರುದ್ಧ; ಕಲ್ಲುಮಾಡಂಡ ತಂಡವು 2-0ಯಿಂದ ಚೇರಂಡ ವಿರುದ್ಧ; ಚೇಯಂಡ ತಂಡವು 1-0ಯಿಂದ ಪಟ್ಟಡ ವಿರುದ್ಧ;  ಕೊಕ್ಕಂಡ 3-2 ಪಟ್ಟಮಾಡವನ್ನು ಸೋಲಿಸಿತು.

ಪ್ರತಿಕ್ರಿಯಿಸಿ (+)