ಮಂಗಳವಾರ, ಮೇ 18, 2021
28 °C

ಕೋಡಿಹಳ್ಳಿ ಜನರ ಮುಗಿಯದ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಪಟ್ಟಣದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸ್ಥಳೀಯರ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಪಟ್ಟಣದ ಕೋಡಿಹಳ್ಳಿ ರಸ್ತೆ ನಿವಾಸಿಗಳು ದೂರಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಸುರಿದ ಬಿರುಮಳೆಗೆ ಹರಿದು ಬಂದ ನೀರು ಸರಿಯಾಗಿ ಹರಿದು ಹೋಗದೆ ಮನೆಗಳ ಒಳಗೆ ನುಗ್ಗಿದೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ.ಪಕ್ಕದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿರುವುದು ಕೂಡ ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಕೋಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಅಪಾರ ಪ್ರಮಾಣದಲ್ಲಿ ರೈಲ್ವೆ ಕಾಮಗಾರಿಗೆ ಮಣ್ಣು ಸಂಗ್ರಹಿಸಿದ್ದು ನೀರು ನುಗ್ಗಿದ್ದರಿಂದ ಆಂಜನೇಯ ದೇವಾಲಯದ ತಡೆಗೋಡೆ ಕುಸಿಯುವ ಹಂತದಲ್ಲಿದೆ.ಇಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದ್ದು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಕಾಳಜಿ ವಹಿಸಬೇಕಿದ್ದ ಚುನಾಯಿತ ಪ್ರತಿನಿಧಿಗಳು ಇತ್ತ ತಲೆ ಹಾಕಿಲ್ಲ. ನಾಗದೇವನಹಳ್ಳಿ ಕ್ಯಾಂಪ್ ಬಳಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಅಳವಡಿಸಿದ್ದು ಇಲ್ಲಿಂದ ಹಾದು ಹೋಗಿರುವ ವಿದ್ಯುತ್‌ಲೈನ್ ಮನೆಗಳ ಹಿತ್ತಲಿನ ಗಿಡಗಳಿಗೆ ತಾಗುವಂತಿದೆ.ಯಾರಾ ದರೂ ಹೂ ಬಿಡಿಸಲು ಹೋಗಲೂ ಹೆದರು ವಂತಾಗಿದ್ದು ಲೈನ್ ಎತ್ತರಿಸಿ ಮರಗಳನ್ನು ಕಡಿಯಬೇಕೆಂದು ಅನೇಕ ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಮೋಹನ್ ಮತ್ತು ಬಸವರಾಜ್ ದೂರುತ್ತಾರೆ.ಇನ್ನು ಇಲ್ಲಿನ ಚರಂಡಿಗಳ ಸ್ವಚ್ಛತೆ ಬಗ್ಗೆ ಪೌರ ಕಾರ್ಮಿಕರೂ ಗಮನ ಹರಿಸದೆ ಚರಂಡಿಗಳಲ್ಲಿ ಕೊಳಚೆ ತುಂಬಿ ನೀರು ನಿಂತಿದ್ದು ಸೊಳ್ಳೆಗಳು ಮನೆ ಮಾಡಿವೆ. ಪಟ್ಟಣದ ಕ್ಯಾಂಪ್ ಬಡಾವಣೆಯ ಎಲ್ಲ ರೀತಿಯ ನೀರು ಸಂಗ್ರಹವಾಗುವ  ಮಠದ ಗುಂಡಿ ತುಂಬಿದರೆ ಇಲ್ಲಿ ವಾಸ ಮಾಡುವವರು ಮೂಗು ಮುಚ್ಚಿ ಓಡಾಡಬೇಕಿದೆ. ಅಲ್ಲದೆ ಇಲ್ಲಿ  ತುಂಬಿ ಹೊರ ಹರಿಯುವ ನೀರು ಕೋಡಿಹಳ್ಳಿ ರಸ್ತೆಯ ಮನೆಗಳಿಗೆ ನುಗ್ಗುತ್ತದೆ.ಇಲ್ಲಿ ಕಟ್ಟೆ ಎತ್ತರಿಸುವ ಕೆಲಸ ಆಗಬೇಕು ಮತ್ತು ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಜಾನುವಾರುಗಳಿಗೆ ನೀರು ಕುಡಿಯಲು ನಿರ್ಮಿಸಿರುವ ತೊಟ್ಟಿಯಲ್ಲಿ ನೀರು ಸಂಗ್ರಹ ವಾಗುವಂತೆ ನಿಗಾ ವಹಿಸಬೇಕು, ಕುಡಿಯುವ ನೀರಿನ ಸಮರ್ಪಕ ವಿತರಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿರುವ ಸ್ಥಳೀಯರು ಇಲ್ಲದಿದ್ದಲ್ಲಿ ಪುರಸಭೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.