ಭಾನುವಾರ, ನವೆಂಬರ್ 17, 2019
25 °C

ಕೋದಂಡರಾಮಸ್ವಾಮಿ ರಥೋತ್ಸವ

Published:
Updated:

ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಗ್ರಾಮದ ಶುಕ್ರವಾರ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಭಕ್ತರಿಂದ ಅಭಿಷೇಕ, ವಿಶೇಷ ಅಲಂಕಾರ ಸಹಸ್ರ ನಾಮಾರ್ಚನೆ, ಮಹಾ ಮಂಗಳಾರತಿ ನಡೆಯಿತು. ದೇಗುಲ ಸಮಿತಿ ಸದಸ್ಯ ಜೆ.ಎಂ.ರಾಜಣ್ಣಶೆಟ್ಟಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ  ಚಾಲನೆ ನೀಡಿದರು.ಇದೇ ವೇಳೆ ರಾಮ ನವಮಿ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳನ್ನು ವೈಭವಯುತವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನದಿಂದ ಡೂಲ್ಲು ಕುಣಿತ, ನಾದಸ್ವರದೊಂದಿಗೆ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮಕ್ಕೆ ವಿಶೇಷ ಮೆರಗು ತುಂಬಿತು. ಗಾಣಿಗ ಯುವಕರ ಸಂಘದ ವತಿಯಿಂದ ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)