ಕೋದಂಡರಾಮ ನಗರ: ಆಸ್ಪತ್ರೆ ನಿಮಾರ್ಣಕ್ಕೆ ಚಾಲನೆ

7

ಕೋದಂಡರಾಮ ನಗರ: ಆಸ್ಪತ್ರೆ ನಿಮಾರ್ಣಕ್ಕೆ ಚಾಲನೆ

Published:
Updated:
ಕೋದಂಡರಾಮ ನಗರ: ಆಸ್ಪತ್ರೆ ನಿಮಾರ್ಣಕ್ಕೆ ಚಾಲನೆ

ವೈಟ್‌ಫೀಲ್ಡ್‌: ‘ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡತಿ ಮತ್ತು ಹಾಲನಾಯಕನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.ಸೋಮವಾರ ಇಲ್ಲಿಗೆ ಸಮೀಪದ ಸರ್ಜಾಪುರ ರಸ್ತೆಯ ಹಾಲನಾಯಕನ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋದಂಡರಾಮ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.‘ಕ್ಷೇತ್ರದ ಬಿದರಹಳ್ಳಿ ಹೋಬಳಿ ವ್ಯಾಪ್ತಿಯನ್ನು ನಗರ ಸಭೆಯನ್ನಾಗಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry