ಕೋಮಲ ಕಂಠದ ಅನ್ವಿತಾ ಗಾಯನ

7

ಕೋಮಲ ಕಂಠದ ಅನ್ವಿತಾ ಗಾಯನ

Published:
Updated:

ಒಂದು ಕಡೆ ಕಿಕ್ಕಿರಿದು ತುಂಬಿದ್ದ ಸಭಾಂಗಣ.. ಮತ್ತೊಂದೆಡೆ ಎಂಟು ವರ್ಷದ ಪೋರಿ ಅನ್ವಿತಾ ವೇದಿಕೆ ಮೇಲೆ ಹಾಡಲು ಶುರುಮಾಡಿದಾಗ ಸಭಾಂಗಣದಲ್ಲಿ ಸೇರಿದ ಸಂಗೀತಾಭಿಮಾನಿಗಳು ಒಂದು ಕ್ಷಣ ಅವಳ ಕಂಠಸಿರಿಗೆ ತಲೆದೂಗಿದರು.ನಗರದ ಫಲಿಮಾರು ಮಠದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಈ ಪೋರಿ `ಮೊದಲ್ವಂದಿಪೆ ನಿನಗೆ ಗಣನಾಥ~ ಎಂಬ ವಿಘ್ನೇಶ್ವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದಳು. `ಬೃಂದಾವನದಲಿ ನಿಂದ~ `ಚಂದ್ರ ಚೂಡ ಶಿವಶಂಕರ~, `ಶಿವನೇ ನಾ ನಿನ್ನ ಸೇವಕನಯ್ಯ~. ಹನುಮಾನ್ ಕೀ ಜೈ, `ಪವಮಾನ ಜಗದ ಪ್ರಾಣ~ ಒಳಗೊಂಡಂತೆ ಹಲವಾರು ದಾಸರ ಪದಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನಸೂರೆಗೊಂಡಳು.ಎರಡು  ಗಂಟೆಗೂ ಅಧಿಕ ಸಂಗೀತ ಸಮಾರಂಭದಲ್ಲಿ ಪ್ರೇಕ್ಷಕರನ್ನು ಅತ್ತಿತ್ತ ನೋಡದಂತೆ ಹಿಡಿದಿಡುವ ರೀತಿಯಲ್ಲಿ ಅನ್ವಿತ ಹಾಡಿದಳು. ಕಾರ್ಯಕ್ರಮ ಮುಗಿದರೂ ಜನರ ಮನಸ್ಸಿನಲ್ಲಿ ಅನ್ವಿತಾ ಇನ್ನಷ್ಟು ರಂಜಿಸಲಿ ಎಂಬ ಆಶಯವಿತ್ತು. ಕಾರ್ಯಕ್ರಮ ಮುಗಿದು ಹೊರನಡೆದರೂ ಪ್ರೇಕ್ಷಕರು ಅನ್ವಿತಾಳ ಗಾಯನದ ಗುಂಗಿನಿಂದ ಹೊರ ಬಂದಿರಲಿಲ್ಲ.ಜಿ.ಎಸ್.ಎನ್.ಎಲ್ ಮೂರ್ತಿ (ಕೀಬೋರ್ಡ್), ಅಭಯ್ ಕುಲಕರ್ಣಿ (ತಬಲಾ), ಭಾನುಪ್ರಕಾಶ (ರಿದಂ ಪ್ಯಾಡ್) ಅನ್ವಿತಾಳ ಹಾಡಿಗೆ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry