ಕೋರಂ ಅಭಾವ: ತಾ.ಪಂ. ಸಭೆ ಮುಂದೂಡಿಕೆ

7

ಕೋರಂ ಅಭಾವ: ತಾ.ಪಂ. ಸಭೆ ಮುಂದೂಡಿಕೆ

Published:
Updated:

ಕೂಡ್ಲಿಗಿ: ಸದಸ್ಯರ ಕೋರಂ ಇಲ್ಲದ ಕಾರಣ ಶುಕ್ರವಾರ ನಡೆಯಬೇಕಿದ್ದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಲಾಗಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಣ್ಣವೀರಣ್ಣ ತಿಳಿಸಿದರು.ವ್ಯವಹಾರ: ಸಭೆಗೆ ಗೈರಾದ ತಾ.ಪಂ ಸದಸ್ಯರು

ಕೂಡ್ಲಿಗಿ: ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಇದುವರೆಗೂ ಸೂಕ್ತ ಉತ್ತರ ದೊರೆಯದೇ ಇರುವುದರಿಂದ ತಾ.ಪಂ ಸಾಮಾನ್ಯ ಸಭೆಗೆ ಗೈರು ಹಾಜರಾಗಿರುವುದಾಗಿ ನೊಂದ ಸಮಾನ ಮನಸ್ಕ ತಾ.ಪಂ ಸದಸ್ಯರ ಪರವಾಗಿ ಸದಸ್ಯೆ ವಿ.ಮಂಗಳಮ್ಮ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರವೊಂದನ್ನು ಸಲ್ಲಿಸಿದ್ದಾರೆ.2011ರ ಫೆಬ್ರವರಿ 17ರಿಂದ ಇದುವರೆಗೂ ನಡೆದ ಸಾಮಾನ್ಯ ಸಭೆಯಲ್ಲಿ ಯಾವುದೇ ಸದಸ್ಯರ ಪ್ರಶ್ನೆಗಳಿಗೆ ಲಿಖಿತ ಉತ್ತರ ದೊರೆಯದಿರುವುದು ತಮಗೆ ಬೇಸರವನ್ನುಂಟು ಮಾಡಿದೆ. ಅದಕ್ಕಾಗಿ ಸಾಮಾನ್ಯ ಸಭೆಗೆ ತಾ.ಪಂ ಸದಸ್ಯರೆಲ್ಲರೂ ಗೈರು ಹಾಜರಾಗಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry