ಕೋರವಾರ ಅಣಿವೀರಭದ್ರೇಶ್ವರ

7

ಕೋರವಾರ ಅಣಿವೀರಭದ್ರೇಶ್ವರ

Published:
Updated:
ಕೋರವಾರ ಅಣಿವೀರಭದ್ರೇಶ್ವರ

ಗುಲ್ಬರ್ಗದಿಂದ ಪೂರ್ವಕ್ಕೆ 30 ಕಿಮಿ ದೂರದ ಕೋರವಾರದ ಅಣಿವೀರಭದ್ರೇಶ್ವರ ಪ್ರಸಿದ್ಧ ಯಾತ್ರಾ ಕ್ಷೇತ್ರ. ದೇವಸ್ಥಾನವು ಕೋರವಾರದ ಅಣಿ ಭಾಗದಲ್ಲಿ (ಅಣಿ ಎಂದರೆ  ಗುಡ್ಡದ ಮೇಲಿನ ನಿರ್ಜನ ಪ್ರದೇಶ) ಇರುವದರಿಂದ ಇದಕ್ಕೆ ಅಣಿವೀರಭದ್ರೇಶ್ವರ ಎಂದು ಕರೆಯಲಾಗುತ್ತದೆ.ಇದು ರಾಷ್ಟ್ರಕೂಟರ ಶೈಲಿಯಲ್ಲಿ ನಿರ್ಮಾಣವಾಗಿದ್ದು ಮಹಾರಾಷ್ಟ್ರ, ಆಂಧ್ರದಿಂದಲೂ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತಿದೆ. ಒಳಪ್ರಾಂಗಣದಲ್ಲಿ ಎತ್ತರವಾದ ಮಾಲಗಂಬಗಳಿವೆ. ವಿಶಾಲವಾದ 3 ದ್ವಾರಗಳು ಸೌಂದರ್ಯ ಹೆಚ್ಚಿಸಿವೆ.

 

ದೇವಸ್ಥಾನದ ಒಳಭಾಗದಲ್ಲಿ  ಕಾಳಿಕಾ ಮಂದಿರವಿದೆ. ನವಗ್ರಹಗಳನ್ನು ಸೂಚಿಸುವ 9 ದೀಪಸ್ತಂಭಗಳಲ್ಲಿ ಭಕ್ತರು ದೀಪ ಹೊತ್ತಿಸುವ ಮೂಲಕ ಹರಕೆ ತೀರಿಸುತ್ತಾರೆ.ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಪ್ರವಚನ, ಮಹಾ ಶಿವರಾತ್ರಿಗೆ ಅಗ್ನಿಪ್ರವೇಶ, ಅಮಾವಾಸ್ಯೆ ದಿ ಕೆಂಡದ ಸೇವೆ ನಡೆಯುತ್ತದೆ. ಫಾಲ್ಗುಣ ಪ್ರತಿಪದದಂದು (ಈ ಸಲ ಫೆ. 22) ರಥೋತ್ಸವ.

 

ಈ ಸಂದರ್ಭಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರುತ್ತಾರೆ. ಭಕ್ತಾದಿಗಳ ವಾಸ್ತವ್ಯಕ್ಕೆ ಭಕ್ತನಿವಾಸದ ವ್ಯವಸ್ಥೆಯಿದೆ. ಶ್ರೀ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಅರ್ಚಕ ಧನಂಜಯ ಶಾಸ್ತ್ರಿ ಅವರ ಮೊಬೈಲ್ ಸಂಖ್ಯೆ 97416 81101.

ಸೇವೆ, ಮಾರ್ಗ

ಸೇವಾ ಶುಲ್ಕಗಳು: ಅಭಿಷೇಕ 201 ರೂ, ರುದ್ರಾಭಿಷೇಕ 251 ರೂ, ದಂಡನಮಸ್ಕಾರ 101 ರೂ, ತನಾರತಿ 51 ರೂ, ಜಂಗಮಾರ್ಚನೆ 101 ರೂ, ಸಹಸ್ರ ಜಂಗಮಾರ್ಚನೆ 1001 ರೂ, ಜಾವಳ 251 ರೂ, ಎಲೆ ಪೂಜೆ 151 ರೂ, ಕಿರಗುಣಿ 101 ರೂ ಮತ್ತು ಗೂಳಿ ಬಿಡುವುದು 1001 ರೂ.ಮಾರ್ಗ

ಗುಲ್ಬರ್ಗದಿಂದ ಚಿಂಚೋಳಿ ಮತ್ತು ಕಾಳಗಿಗೆ ಹೋಗುವ ಎಲ್ಲ ಬಸ್‌ಗಳು ದೇವಾಲಯದ ಮುಂದೆ ನಿಲ್ಲುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry