ಕೋರ್ಟ್‌ಗೆ ಪಿಳ್ಳೈ ಶರಣು

7

ಕೋರ್ಟ್‌ಗೆ ಪಿಳ್ಳೈ ಶರಣು

Published:
Updated:

ಕೊಚ್ಚಿ, (ಪಿಟಿಐ): ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಒಂದು ವರ್ಷದ ಜೈಲುಶಿಕ್ಷೆಗೆ ಗುರಿಯಾದ ಕೇರಳದ ಮಾಜಿ ವಿದ್ಯುತ್ ಸಚಿವ ಹಾಗೂ ಕೇರಳ ಕಾಂಗ್ರೆಸ್ (ಬಿ) ಮುಖಂಡ ಬಾಲಕೃಷ್ಣ ಪಿಳ್ಳೈ ಅವರು ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ಶರಣಾದರು.76ರ ಹರೆಯದ ಪಿಳ್ಳೈ ಅವರು ನ್ಯಾಯಾಲಯದ ಮುಂದೆ ಶರಣಾಗುತ್ತಾರೆ  ಎನ್ನುವ ಸುದ್ದಿ ತಿಳಿದು ಪಕ್ಷದ ಕಾರ್ಯಕರ್ತರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಪಿಳ್ಳೈ ಅವರು ನ್ಯಾಯಾಲಯದಲ್ಲಿ ಶರಣಾಗಬೇಕು ಇಲ್ಲದಿದ್ದಲ್ಲಿ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿತ್ತು.ಭ್ರಷ್ಟಾಚಾರ ಪ್ರಕರಣದಲ್ಲಿ ಮೂರನೇ ಆಪಾದಿತನಾದ ಗುತ್ತಿಗೆದಾದ ಪಿ.ಕೆ. ಸಜೀವನ್ ಕೂಡ ನ್ಯಾಯಾಲಯಕ್ಕೆ ಶರಣಾದರು. ಎರಡನೇ ಆರೋಪಿ ಹಾಗೂ ಕೆಎಸ್‌ಇಬಿ ಮಾಜಿ ಅಧ್ಯಕ್ಷ ರಾಮಭದ್ರನ್ ನಾಯರ್ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ತಮಗೆ ಕಾಲಾವಕಾಶ ಬೇಕೆಂದು ಕೋರಿ ಪಿಳ್ಳೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ 2 ದಿನಗಳ ಹಿಂದೆ ತಿರಸ್ಕರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry