ಕೋರ್ಟ್‌ಗೆ ಲೆನಿನ್ ಹಾಜರು

ಶುಕ್ರವಾರ, ಜೂಲೈ 19, 2019
22 °C

ಕೋರ್ಟ್‌ಗೆ ಲೆನಿನ್ ಹಾಜರು

Published:
Updated:

ರಾಮನಗರ: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಮೇಲೆ ರಾಸಲೀಲೆ ಪ್ರಕರಣ ಹೂಡಿರುವ ಲೆನಿನ್‌ಕುರುಪ್ಪನ್ ಶುಕ್ರವಾರ ರಾಮನಗರದ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರಾದರು.ರಾಸಲೀಲೆಯ ಪ್ರಕರಣದ ಸಿ.ಡಿ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರನಟಿ ರಂಜಿತಾ ಹೂಡಿದ್ದ ಮೊಕದ್ದಮೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಲೆನಿನ್ ವಿಚಾರಣೆ ಎದುರಿಸಿದರು.ಬೇರೆ ಪ್ರಕರಣದಲ್ಲಿ ತಮಿಳುನಾಡಿನಲ್ಲಿ ಬಂಧನದಲ್ಲಿದ್ದ ಲೆನಿನ್ ಈ ಹಿಂದೆ ವಿಚಾರಣೆಗೆ ರಾಮನಗರ ನ್ಯಾಯಾಲಯಕ್ಕೆ ಆಗಮಿಸಿರಲಿಲ್ಲ. ಇದರಿಂದ ನ್ಯಾಯಾಧೀಶರು ಖುದ್ದು ಹಾಜರಿಗೆ ಸಮನ್ಸ್ ಜಾರಿಗೊಳಿಸಿದ್ದರು.ತಮಿಳುನಾಡಿನಲ್ಲಿ ಈಚೆಗೆ ಜಾಮೀನು ದೊರೆತಿತ್ತು. ಲೆನಿನ್ ಶುಕ್ರವಾರ ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎನ್.ರೂಪಾ ಅವರು ವಿಚಾರಣೆ ಸೆಪ್ಟೆಂಬರ್ 29ಕ್ಕೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry