ಕೋರ್ಟ್‌ಗೆ ಹಾಜರು: ಶೀಲಾ ಕೌಲ್‌ಗೆ ಆದೇಶ

5

ಕೋರ್ಟ್‌ಗೆ ಹಾಜರು: ಶೀಲಾ ಕೌಲ್‌ಗೆ ಆದೇಶ

Published:
Updated:

ನವದೆಹಲಿ (ಪಿಟಿಐ): ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಲು `ವಯಸ್ಸು ಮಾನದಂಡ~ ಆಗಲಾರದು ಎಂದು ಸ್ಪಷ್ಟವಾಗಿ ಹೇಳಿರುವ ಸಿಬಿಐ ನ್ಯಾಯಾಲಯ, 98 ವರ್ಷದ ಕೇಂದ್ರದ ಮಾಜಿ ಸಚಿವೆ ಶೀಲಾ ಕೌಲ್ ಅವರಿಗೆ ವಿಚಾರಣೆಗೆ ಹಾಜರಾಗಲು ಆದೇಶಿಸಿದೆ.  1996ರಲ್ಲಿ ನಡೆದ ಸರ್ಕಾರಿ ವಸತಿ ಹಂಚಿಕೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಕೌಲ್ ಅವರ ಇಳಿವಯಸ್ಸಿನ ಕಾರಣದಿಂದಾಗಿಯೇ ಅವರು ವಿಚಾರಣೆಗೆ ಹಾಜರಾಗುವುದರಿಂದ `ವಿನಾಯಿತಿ~ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ನ್ಯಾಯಾಲಯವು  ಇದೇ ವೇಳೆ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry