ಕೋರ್ಟ್‌ಗೆ ಹಾಲಪ್ಪ ಹಾಜರು

7

ಕೋರ್ಟ್‌ಗೆ ಹಾಲಪ್ಪ ಹಾಜರು

Published:
Updated:

ಶಿವಮೊಗ್ಗ:  ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್. ಹಾಲಪ್ಪ ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಮಂಗಳವಾರ ಹಾಜರಾದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ್‌ಗೌಡ ಪ್ರತಿವಾದಿಗಳಿಗೆ ಸಿ.ಡಿ. ಪ್ರತಿ ನೀಡುವಂತೆ ಸಿಐಡಿಗೆ ಆದೇಶಿಸಿ, ಫೆಬ್ರುವರಿ 27ಕ್ಕೆ ವಿಚಾರಣೆಯನ್ನು ಮುಂದೂಡಿದರು.ಈ ಮೊದಲು ಹಾಲಪ್ಪ ಪರ ವಕೀಲರು ತಿರುಮಲ ಲಾಡ್ಜ್‌ನಲ್ಲಿನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳ ಸಿ.ಡಿ.ಯ ಪ್ರತಿ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಇದಕ್ಕೆ ಅನುಮತಿ ನೀಡಿದ್ದ ನ್ಯಾಯಾಲಯ ಸಿ.ಡಿ.ಯ ಪ್ರತಿ ನೀಡುವಂತೆ ಸಿಐಡಿಗೆ ಆದೇಶಿಸಿತ್ತು.ಆದರೆ, ಸಿಐಡಿ ಅಧಿಕಾರಿಗಳು ತಮ್ಮ ವಕೀಲರ ಮೂಲಕ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಫೆಬ್ರವರಿ 27ರಂದು ಸಿ.ಡಿ.ಯ ಪ್ರತಿ ಸಲ್ಲಿಸುವುದಾಗಿ ಮನವಿ ಮಾಡಿದ ಕಾರಣ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry